ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ 11ನೇ ದಿನಕ್ಕೆ ಕಾಲಿಟ್ಟಿದ್ದು, ಹಲವೆಡೆಗಳಲ್ಲಿ ಭೀಕರ ದಾಳಿಯನ್ನು ಮುಂದುವರೆಸಿದೆ. ಈ ನಡುವೆ ಇದೀಗ ಉಕ್ರೇನ್ ನ ಮತ್ತೆ ಮೂರು ನಗರಗಳಲ್ಲಿ ಕದನವಿರಾಮವನ್ನು ರಷ್ಯಾ ಘೋಷಣೆ ಮಾಡಿದೆ.
ಮಾರಿಯುಪೋಲ್, ವೊಲ್ನೊವಾಖಾ, ಲುಹಾನ್ಸ್ ಕಿ ಮೂರು ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದ್ದು, ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಯಿಂದ ಕದನ ವಿರಾಮ ಘೋಷಣೆ ಮಾಡಲಾಗಿದೆ.
ಕೆಲಸ ಕೊಡಿಸುವುದಾಗಿ ಅತ್ಯಾಚಾರ, ಖಾಸಗಿ ವಾಹಿನಿ ಪತ್ರಕರ್ತ ಅರೆಸ್ಟ್
ನಾಗರಿಕರ ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೇವಲ ಎರಡುವರೆ ಗಂಟೆಗಳ ಕಾಲ ಮಾತ್ರ ಈ ಕದನ ವಿರಾಮ ಘೋಷಿಸಲಾಗಿದೆ. ನಿನ್ನೆ 5 ಗಂಟೆಗಳ ಕಾಲ ಎರಡು ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿತ್ತು.