ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನಾ ದಾಳಿ ತೀವ್ರಗೊಂಡಿರುವ ನಡುವೆಯೂ ತನ್ನ ದೇಶ ರಕ್ಷಣೆಗಾಗಿ ಹೋರಾಟ ನಡೆಸಿರುವ ಉಕ್ರೇನ್ ಮಿಲಿಟರಿ ಪಡೆಗಳು, ರಷ್ಯಾ ಸೇನೆ ಹಿಮ್ಮೆಟ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ರಷ್ಯಾ ಸೈನಿಕರಿಗೆ ಕೊನೆ ಎಚ್ಚರಿಕೆ ಸಂದೇಶ ರವಾನಿಸಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಪ್ರಾಣ ಉಳಿಸಿಕೊಳ್ಳುವ ಆಸೆಯಿದ್ದರೆ ರಷ್ಯಾ ಸೈನಿಕರು ತಕ್ಷಣ ಉಕ್ರೇನ್ ತೊರೆಯಿರಿ ಎಂದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದೆ. ಈವರೆಗೆ ರಷ್ಯಾದ ಬರೋಬ್ಬರಿ 4,500 ಯೋಧರು ಮೃತಪಟ್ಟಿದ್ದಾರೆ. 150 ಯುದ್ಧ ಟ್ಯಾಂಕರ್ ಗಳನ್ನು ಧ್ವಂಸಗೊಳಿಸಿದ್ದೇವೆ. ರಷ್ಯಾ ಸೇನೆ ತಕ್ಷಣ ಯುದ್ಧ ನಿಲ್ಲಿಸಲಿ. ಕೂಡಲೇ ಉಕ್ರೇನ್ ತೊರೆದು ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.
BIG NEWS: ಇದನ್ನೆಲ್ಲ ಸಿದ್ದರಾಮಯ್ಯ ತಂದೆ ನೋಡಿದ್ರೆ ‘ಸಿದ್ದರಾಮಯ್ಯ’ ಎಂದು ಹೆಸರಿಡುತ್ತಿರಲಿಲ್ಲ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ. ರವಿ ವಾಗ್ದಾಳಿ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ಸೇನೆಯನ್ನು ಹಿಂಪಡೆದು, ಕದನವಿರಾಮ ಘೋಷಿಸಲಿ ಎಂದು ಶಾಂತಿ ಸಭೆಗೂ ಮುನ್ನ ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ.