ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ಗೆ ಮಾತುಕತೆಗೆ ಬರುವಂತೆ ರಷ್ಯಾ ಬೆಲೊರೆಸ್ ಗೆ ಆಹ್ವಾನ ನೀಡಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ರಷ್ಯಾ ತನ್ನನ್ನು ಕೊಲ್ಲಲು ಆದೇಶ ನೀಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಅವರೊಂದಿಗೆ ಮಾತುಕತೆ ವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನನ್ನ ಹತ್ಯೆಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ ನೀಡಿದ್ದಾರೆ. ಕೀವ್ ನಲ್ಲಿ ರಷ್ಯಾದ 400 ಸೈನಿಕರು ನನ್ನ ಹುಡುಕಾಟ ನಡೆಸಿದ್ದಾರೆ. ನನ್ನನ್ನು ಹತ್ಯೆಗೈಯ್ಯಲು ಯೋಜನೆ ರೂಪಿಸಿದ್ದಾರೆ. ಉಕ್ರೇನ್ ಗೆ ಮುಂದಿನ 24 ಗಂಟೆ ನಿರ್ಣಾಯಕವಾಗಿದೆ ಎಂದು ಝೆಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.
WAR BREAKING: 14 ಮಕ್ಕಳು ಸೇರಿ 354 ಜನ ಸಾವು; ಮಾತುಕತೆಗೆ ಒಪ್ಪಿದ ಬಳಿಕವೂ ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ ರಷ್ಯಾ
ಇನ್ನೊಂದೆಡೆ ಕೀವ್ ನಲ್ಲಿ ರಷ್ಯಾ ತನ್ನ ದಾಳಿ ತೀವ್ರಗೊಳಿಸಿದ್ದು, ವಾಯುದಾಳಿ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರದಂತೆ ಕಟ್ಟೆಚ್ಚರಕ್ಕೆ ಉಕ್ರೇನ್ ಸೇನೆ ಸೂಚಿಸಿದೆ.