ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡೊಮೀರ್ ಝೆಲೆನ್ಸ್ಕಿ ಉಕ್ರೇನ್ ತೊರೆದು ಬೇರೆಲ್ಲೋ ಅಡಗಿ ಕುಳಿತಿದ್ದಾರೆ, ಅವರು ನಾಪತ್ತೆಯಾಗಿದ್ದಾರೆ ಎಂಬ ರಷ್ಯಾ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಝೆಲೆನ್ಸ್ಕಿ, ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ ಉಕ್ರೇನ್ ನಲ್ಲಿಯೇ ಇದ್ದೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನಾನು ನಾಪತ್ತೆಯಾಗಿಲ್ಲ, ಕೀವ್ ನಲ್ಲಿಯೇ ಇದ್ದೇನೆ. ಯಾರಿಗೂ ಹೆದರುವ ಮಾತೇ ಇಲ್ಲ. ದೇಶ ತೊರೆಯುವ ಪ್ರಶ್ನೆಯೂ ಇಲ್ಲ. ನಿರಂತರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಕ್ರೇನ್ ಸೈನಿಕರಿಗೆ ಸಾವಿರ ಡಾಲರ್ ವೇತನವನ್ನು ಉಕ್ರೇನ್ ಸರ್ಕಾರ ಹೆಚ್ಚಿಸಿದೆ. ಈ ನಡುವೆ ವಿಶ್ವ ಬ್ಯಾಂಕ್ ಅಗತ್ಯ ಸೇವೆಗಳಿಗಾಗಿ ಉಕ್ರೇನ್ ಗೆ 700 ಮಿಲಿಯನ್ ಡಾಲರ್ ನೆರವು ಘೋಷಿಸಿದೆ.