ಕೀವ್: ಉಕ್ರೇನ್ ವಿರುದ್ಧ ರಷ್ಯಾ ಸಮರ 6ನೇ ದಿನಕ್ಕೆ ಕಾಲಿಟ್ಟಿದ್ದು, ರಾಜಧಾನಿ ಕೀವ್, ಖಾರ್ಕಿವ್ ನಗರಗಳಲ್ಲಿ ರಷ್ಯನ್ ಮಿಲಿಟರಿ ಪಡೆ ನಿರಂತರವಾಗಿ ಕ್ಷಿಪಣಿ, ಗುಂಡಿನ ದಾಳಿ ನಡೆಸಿದೆ. ರಷ್ಯಾ ಅಟ್ಟಹಾಸಕ್ಕೆ ಉಕ್ರೇನ್ ಸಂಪೂರ್ಣ ನಲುಗಿದ್ದು, ಸುಂದರ ನಗರಗಳು ಸ್ಮಶಾನದಂತಾಗಿವೆ.
ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ರಷ್ಯಾ ಶೆಲ್ ದಾಳಿ ನಡೆಸಿದ್ದು, 11 ಜನರು ಸಾವನ್ನಪ್ಪಿದ್ದಾರೆ. ರಷ್ಯಾ ದಾಳಿಗೆ ಈವರೆಗೆ 14 ಮಕ್ಕಳು ಸೇರಿದಂತೆ ಒಟ್ಟು 352 ಜನರು ಬಲಿಯಾಗಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
ಈ ನಡುವೆ ಖಾರ್ಕಿವ್ ನ ಬೃಹತ್ ಖಾರ್ಕಾನೆ ಮೇಲೆ ರಷ್ಯಾ ಬಾಂಬ್ ಸ್ಫೋಟ ನಡೆಸಿದ್ದು, ಕಟ್ಟಡ ಸಂಪೂರ್ಣ ನಾಮಾವಶೇಷಗೊಂಡಿದೆ. ಕೀವ್ ಹಾಗೂ ಖಾರ್ಕಿವ್ ನಗರಗಳಲ್ಲಿ ಬೀಡುಬಿಟ್ಟಿರುವ ರಷ್ಯಾ ಸೈನಿಕರು ಮನಬಂದಂತೆ ಗುಂಡಿನ ದಾಳಿ, ಬಾಂಬ್ ಸ್ಫೋಟ ನಡೆಸಿದ್ದಾರೆ.
ಈ ನಡುವೆ ಭಾರತ, ಉಕ್ರೇನ್ ಹಾಗೂ ರಷ್ಯಾ ಉಭಯದೇಶಗಳು ರಾಜತಾಂತ್ರಿಕ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದೆ.