ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ರಾಜಧಾನಿ ಕೀವ್ ನಗರದಲ್ಲಿ ಅಟ್ಟಹಾಸ ಮೆರೆದಿದೆ. ಕಾರಿನ ಮೇಲೆ ಯುದ್ಧ ಟ್ಯಾಂಕರ್ ಹತ್ತಿಸಿ ಕ್ರೌರ್ಯದ ಪರಾಕಾಷ್ಠೆ ಮೆರೆದಿದೆ.
ಉಕ್ರೇನ್ ನ ರಾಜಧಾನಿ ಕೀವ್ ನಗರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಪ್ರಯತ್ನ ನಡೆಸಿರುವ ರಷ್ಯಾ ಮಿಲಿಟರಿ ಪಡೆ ಓಬೋಲಾನ್ ನಗರ ಮೂಲಕ ರಾಜಧಾನಿಗೆ ಎಂಟ್ರಿ ಕೊಟ್ಟಿದ್ದು, ಕೀವ್ ನಗರದ ಕಟ್ಟಡಗಳ ಮೇಲೆ, ಏರ್ ಪೋರ್ಟ್ ಬಳಿ ಬಾಂಬ್ ದಾಳಿ ನಡೆಸಿದ್ದು, ಮನೆಗಳು, ಬೃಹತ್ ಕಟ್ಟಡಗಳು ಹೊತ್ತಿ ಉರಿದಿವೆ.
ಈ ನಡುವೆ ಕೀವ್ ನಗರದಲ್ಲಿ ಕ್ರೌರ್ಯ ಮೆರೆಯುತ್ತಿರುವ ರಷ್ಯಾ ಸೇನೆಪಡೆಗಳು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಯುದ್ಧ ಟ್ಯಾಂಕರ್ ಹತ್ತಿಸಿದ್ದಾರೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಲ್ಲಿ ಸಿಲುಕಿರುವ ವ್ಯಕ್ತಿಯನ್ನು ಹೊರ ತೆಗೆಯಲು ಉಕ್ರೇನ್ ಸೈನಿಕರು, ನಾಗರಿಕರು ಹರಸಾಹಸಪಟ್ಟಿದ್ದಾರೆ.
ಇಲ್ಲಿನ ಮಹಿಳೆಯರ ದೇಹದ ಮೇಲಿರಬೇಕು ʼಬ್ಲೇಡ್ʼ ಗುರುತು
ಇನ್ನೊಂದೆಡೆ ಕೀವ್ ನಲ್ಲಿ ಏರ್ ಸ್ಟ್ರೈಕ್ ಬಗ್ಗೆ ಸೈರನ್ ಮೊಳಗುತ್ತಿದ್ದಂತೆ ಜನರು ಪ್ರಾಣ ಉಳಿಸಿಕೊಳ್ಳಲು ರೈಲು ನಿಲ್ದಾಣದೊಳಕ್ಕೆ ಓಡುತ್ತಿದ್ದಾರೆ. ಉಕ್ರೇನ್ ನಲ್ಲಿ ರಣಭೀಕರ ವಾತಾವರಣ ನಿರ್ಮಾಣವಾಗಿದ್ದು, ಕ್ಷಣ ಕ್ಷಣಕ್ಕೂ ಆತಂಕವನ್ನು ಹೆಚ್ಚಿಸಿದೆ.