ಕೀವ್: ಉಕ್ರೇನ್ ಮೇಲೆ ನಿರಂತರ ದಾಳಿ ಮುಂದುವರೆಸಿರುವ ರಷ್ಯಾ, ಇಡೀ ಉಕ್ರೇನ್ ನನ್ನು ಸಂಪೂರ್ಣ ಕತ್ತಲು ಕೂಪಕ್ಕೆ ತಳ್ಳುವ ಯೋಜನೆ ರೂಪಿಸಿದೆ. ಈಗಾಗಲೇ 2 ಅಣು ವಿದ್ಯುತ್ ಸ್ಥಾವರನ್ನು ವಶಕ್ಕೆ ಪಡೆದಿರುವ ರಷ್ಯಾ, ಇದೀಗ ದೇಶದಲ್ಲಿ ಅನಿಲ ಬಿಕ್ಕಟ್ಟು ಸೃಷ್ಟಿಸಲು ಮುಂದಾಗಿದೆ. ಮತ್ತೊಂದೆಡೆ ನೀರು ಪೂರೈಕೆ ಘಟಕಗಳ ಮೇಲೂ ದಾಳಿ ನಡೆಸಿದೆ.
ಉಕ್ರೇನ್ ನಲ್ಲಿ 6 ಕಡೆಗಳಲ್ಲಿ ರಷ್ಯಾ ಇಂದು ಭೀಕರ ದಾಳಿ ನಡೆಸಿದ್ದು, 16 ಗ್ಯಾಸ್ ಪೂರೈಕೆ ಕೇಂದ್ರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದರಿಂದಾಗಿ ವಿಶ್ವದ ಹಲವೆಡೆ ಅನಿಲ ಪೂರೈಕೆಯಲ್ಲಿ ಬಿಕ್ಕಟ್ಟು ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಮತ್ತೊಂದೆಡೆ ಝೈಟೊಮಿರ್ ಮೆಟ್ರೋ ಸ್ಟೇಷನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಉಕ್ರೇನ್ ನ 8 ಪ್ರದೇಶಗಳಲ್ಲಿ ರಷ್ಯಾ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ನೀರು, ವಿದ್ಯುತ್ ಪೂರೈಕೆ ಕೇಂದ್ರಗಳು ನಾಶವಾಗಿವೆ.
ಉಕ್ರೇನ್ ನ ಪ್ರಮುಖ ರೈಲು ನಿಲ್ದಾಣಗಳ ಮೇಲೂ ದಾಳಿ ನಡೆಸುತ್ತಿರುವುದರಿಂದ ಜನರ ಸ್ಥಳಾಂತರ ಕೂಡ ಸಮಸ್ಯೆಯಾಗುತ್ತಿದೆ ಎಂದು ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ.