ಕಲಬುರಗಿ: ರಾಜ್ಯದಲ್ಲಿ ವಕ್ಫ್ ಬೊರ್ಡ್ ನಿಂದ ರೈತರ ಭೂಮಿ ಕಬಳಿಕೆ ವಿವಾದ ತಾರಕ್ಕೇರಿದ್ದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ರೈತರಿಗೆ ನೋಡಲಾಗಿದ್ದ ನೋಟಿಸ್ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈ ನಡುವೆ ವಕ್ಫ್ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರದಿಂದ ವಿಶೇಷ ತಂಡ ಕೂಡ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕ್ಫ್ ಬಳಿ ಇರುವುದು ಸರ್ಕಾರ ಕೊಟ್ಟ ಜಮೀನಲ್ಲ. ಹಲವರಿಗೆ ಈ ಬಗ್ಗೆ ತಪ್ಪು ಕಲ್ಪನೆ ಇದೆ. ವಕ್ಫ್ ಎಂದರೆ ಅದು ಸರ್ಕಾರವೇ ಅದಕ್ಕೆ ಕೊಟ್ಟ ಜಮೀನು ಎಂದುಕೊಂಡಿದ್ದಾರೆ. ಆದರೆ ವಕ್ಫ್ ಬಳಿ ಇರುವುದು ಸರ್ಕಾರ ಕೊತ್ತ ಜಮೀನಲ್ಲ. ಅದು ದಾನಿಗಳು ಕೊಟ್ಟ ಜಮೀನು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ತರಲಿ ತಂದ ಬಳಿಕ ಮುಂದೆ ಏನು ಮಾಡಬೇಕೋ ಮಾಡುತ್ತೇವೆ. ವಕ್ಫ್ ಇವತ್ತಿನದ್ದಲ್ಲ. ಸ್ವಾತಂತ್ರ್ಯಕ್ಕೂ ಮೊದಲೇ ವಕ್ಫ್ ಇದೆ ಎಂದು ತಿಳಿಸಿದರು.