
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ನಾಳೆ ಅಂದರೆ ಏಪ್ರಿಲ್ 2 ರಂದು ಲೋಕಸಭೆಯಲ್ಲಿ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ತೆಗೆದುಕೊಳ್ಳಲಾಗುವುದು.
ಭಾರತೀಯ ಜನತಾ ಪಕ್ಷ(ಬಿಜೆಪಿ) ಲೋಕಸಭೆಯಲ್ಲಿನ ತನ್ನ ಎಲ್ಲಾ ಸಂಸದರಿಗೆ ಅಧಿವೇಶನದಲ್ಲಿ ಹಾಜರಿರಲು ಮೂರು ಸಾಲಿನ ವಿಪ್ ಜಾರಿ ಮಾಡಿದೆ. ಇಂದು ವ್ಯವಹಾರ ಸಲಹಾ ಸಮಿತಿ(ಬಿಎಸಿ) ಸಭೆ ನಡೆದಿದ್ದು, ವಕ್ಫ್ ಮಸೂದೆಗೆ ಎಂಟು ಗಂಟೆಗಳ ಚರ್ಚೆಯನ್ನು ನಿಗದಿಪಡಿಸಲಾಗಿದೆ. ಕಾಂಗ್ರೆಸ್ 12 ಗಂಟೆಗಳ ಚರ್ಚೆಗೆ ಒತ್ತಾಯಿಸಿದೆ. ಇದು ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೇ, ವಿರೋಧ ಪಕ್ಷದವರ ಸಭಾತ್ಯಾಗಕ್ಕೆ ಕಾರಣವಾಯಿತು.
ಬಿಜೆಪಿ ಸಂಸದರಿಗೆ ವಿಪ್ ಜಾರಿ
ಎಲ್ಲಾ ಬಿಜೆಪಿ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಲಾಗಿದ್ದು, ಏಪ್ರಿಲ್ 2, 2025 ರ ಬುಧವಾರ ಲೋಕಸಭೆಯಲ್ಲಿ ಕೆಲವು ಪ್ರಮುಖ ಶಾಸಕಾಂಗ ವ್ಯವಹಾರಗಳನ್ನು ಅಂಗೀಕರಿಸಲಾಗುವುದು. ಆದ್ದರಿಂದ, ಲೋಕಸಭೆಯಲ್ಲಿರುವ ಎಲ್ಲಾ ಬಿಜೆಪಿ ಸದಸ್ಯರು ಏಪ್ರಿಲ್ 2, 2025 ರ ಬುಧವಾರ ದಿನವಿಡೀ ಸದನದಲ್ಲಿ ಸಕಾರಾತ್ಮಕವಾಗಿ ಹಾಜರಿರಬೇಕು ಮತ್ತು ಸರ್ಕಾರದ ನಿಲುವನ್ನು ಬೆಂಬಲಿಸಬೇಕು ಎಂದು ತಿಳಿಸಲಾಗಿದೆ.
ಕೇಂದ್ರವು ವಕ್ಫ್(ತಿದ್ದುಪಡಿ) ಮಸೂದೆ – 2024 ರ ಕುರಿತು ಚರ್ಚೆಯನ್ನು ಬಯಸುತ್ತದೆ ಎಂದು ಕೇಂದ್ರ ಗೃಹ ಸಚಿವ ಕಿರಣ್ ರಿಜಿಜು ಮಂಗಳವಾರ ಹೇಳಿದ್ದಾರೆ. ಇದನ್ನು ಬುಧವಾರ ಪ್ರಶ್ನೋತ್ತರ ಅವಧಿಯ ನಂತರ ಲೋಕಸಭೆಯಲ್ಲಿ ಪರಿಚಯಿಸಲಾಗುವುದು. ಲೋಕಸಭೆಯ ವ್ಯವಹಾರ ಸಲಹಾ ಸಮಿತಿ(ಬಿಎಸಿ) ಸಭೆಯಲ್ಲಿ ಚರ್ಚೆಗೆ ಎಂಟು ಗಂಟೆಗಳ ಸಮಯವನ್ನು ನಿರ್ಧರಿಸಲಾಗಿದೆ ಎಂದು ರಿಜಿಜು ಮಾಹಿತಿ ನೀಡಿದರು.
BJP issues whip to all Lok Sabha MPs to be present in Parliament tomorrow, 2nd April.
On 2nd April, Waqf Amendment Bill will be introduced for consideration and passing. pic.twitter.com/8coAnUDpyg
— ANI (@ANI) April 1, 2025