ನವದೆಹಲಿ: ದೆಹಲಿ ಪೊಲೀಸರು ಭಾರೀ ಶೋಧ ಕಾರ್ಯಾಚರಣೆಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಗೆ(NIA) ಬೇಕಾಗಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್(IS) ಭಯೋತ್ಪಾದಕನನ್ನು ಬಂಧಿಸಿದ್ದಾರೆ.
ಶಹನವಾಜ್ ಎಂದು ಗುರುತಿಸಲಾಗಿರುವ ಶಂಕಿತನನ್ನು ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ. ಎನ್‌ಐಎ ಅವನ ಸುಳಿವು ನೀಡಿದವರಿಗೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ದೆಹಲಿಯಲ್ಲಿ ಮೂವರು ಐಸಿಸ್ ಭಯೋತ್ಪಾದಕರನ್ನು ಸೆರೆಹಿಡಿಯಲು ಭಯೋತ್ಪಾದನಾ ನಿಗ್ರಹ ಸಂಸ್ಥೆ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು, ‘ಪುಣೆ ಐಸಿಸ್ ಮಾಡ್ಯೂಲ್ ಕೇಸ್’ನಲ್ಲಿ ಮೂವರು ಭಯೋತ್ಪಾದಕರನ್ನು ಗುರುತಿಸಲಾಗಿದೆ. ಅವರಲ್ಲಿ ಒಬ್ಬ ಶಹನವಾಜ್ ಸಫಿಯುಝಾಮ ಆಲಂ ಅಲಿಯಾಸ್ ಅಬ್ದುಲ್ಲಾ.
ಇತರ ಇಬ್ಬರು ಉಗ್ರರನ್ನು ರಿಜ್ವಾನ್ ಅಬ್ದುಲ್ ಹಾಜಿ ಅಲಿ ಮತ್ತು ಅಬ್ದುಲ್ಲಾ ಫಯಾಜ್ ಶೇಖ್ ಎಂದು ಗುರುತಿಸಲಾಗಿದೆ.