
ಅಲ್ಲದೇ ಈ ಬ್ಯಾಗ್ಗಳು ಪರಿಸರ ಸ್ನೇಹಿ ಕೂಡ ಆಗಿರೋದ್ರಿಂದ ಹೆಚ್ಚಿನ ಜನರು ಇದನ್ನ ಮನೆಯಲ್ಲಿ ಇಟ್ಟುಕೊಳ್ತಾರೆ. ಆದರೆ ಈ ಬ್ಯಾಗ್ಗಳನ್ನ ತೊಳೆದ ಬಳಿಕ ಸರಿಯಾಗಿ ಒಣಗಿಸೋದೇ ಒಂದು ದೊಡ್ಡ ಚಾಲೆಂಜ್.
ಇವುಗಳು ಅಷ್ಟು ಸುಲಭವಾಗಿ ಒಣಗೋದಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದರೆ ಈ ಸಮಸ್ಯೆಗೆ ರೆಡಿಟ್ ಬಳಕೆದಾರರೊಬ್ಬರು ಭರ್ಜರಿ ಪ್ಲಾನ್ ನೀಡಿದ್ದಾರೆ.
ಸಿಂಕ್ನಲ್ಲಿ ಇಕ್ಕಳವನ್ನ ಸಿಕ್ಕಿಸಿ ಈ ಇಕ್ಕಳದ ಸಹಾಯದಿಂದ ಮರುಬಳಕೆಯ ಬ್ಯಾಗ್ನ್ನು ಉಲ್ಟಾ ಮಾಡಿ ನಿಲ್ಲಿಸಿ ಒಣಗಿಸಿರೋದನ್ನ ಈ ಫೋಟೋದಲ್ಲಿ ನೀವು ನೋಡಬಹುದಾಗಿದೆ.
ಈ ರೀತಿಯಾಗಿ ನಿಮ್ಮ ಮರುಬಳಕೆಯ ಬ್ಯಾಗ್ನ್ನ ಒಣಗಿಸಿ ಎಂದು ಈ ಫೋಟೋಗೆ ಶೀರ್ಷಿಕೆ ನೀಡಲಾಗಿದೆ. ಈ ಪ್ಲಾನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.