alex Certify ನಿಮ್ಮ ಮಗು ಮೇಧಾವಿಯಾಗಬೇಕೆಂದು ಬಯಸುತ್ತೀರಾ….? ತಪ್ಪದೇ ಕೊಡಿ ಈ ಫುಡ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮಗು ಮೇಧಾವಿಯಾಗಬೇಕೆಂದು ಬಯಸುತ್ತೀರಾ….? ತಪ್ಪದೇ ಕೊಡಿ ಈ ಫುಡ್‌

ತಮ್ಮ ಮಗು ಪ್ರತಿಭಾಶಾಲಿಯಾಗಬೇಕು, ದೈಹಿಕವಾಗಿ ಸದೃಢವಾಗಿರಬೇಕು ಅನ್ನೋದು ಈ ಜಗತ್ತಿನ ಪ್ರತಿಯೊಬ್ಬ ಪೋಷಕರ ಕನಸು. ಎಲ್ಲಾ ಸ್ಪರ್ಧೆಯಲ್ಲಿ ನಮ್ಮ ಮಗು ಇತರ ಮಕ್ಕಳಿಗಿಂತ ಮುಂದಿರಬೇಕೆಂದು ನಾವು ಬಯಸುತ್ತೇವೆ. ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳು ಮತ್ತು ಪ್ರೋಟೀನ್‌ ಸಮೃದ್ಧವಾಗಿರುವ ಆಹಾರವನ್ನು ನೀಡಿದಾಗ ಮಾತ್ರ ಇದು ಸಾಧ್ಯ.

ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಮತ್ತು ಪಾನೀಯವು ಅವಶ್ಯಕವಾಗಿದೆ. ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಹೊಂದಲು ಇದು ಬೇಕೇ ಬೇಕು. ಅನೇಕ ವೈದ್ಯರು ಮಕ್ಕಳನ್ನು ಮಾನಸಿಕವಾಗಿ ತೀಕ್ಷ್ಣ ಮತ್ತು ಬಲಶಾಲಿಯಾಗಿಸಲು ಬೂಸ್ಟರ್ ಆಹಾರವನ್ನು ನೀಡಬೇಕು ಎಂದು ಸಲಹೆ ನೀಡುತ್ತಾರೆ. ಮಗುವಿನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು ಯಾವುವು ಅನ್ನೋದನ್ನು ನೋಡೋಣ.

ಹಸಿರು ತರಕಾರಿಗಳು : ಮಗು ಮೇಧಾವಿಯಾಗಬೇಕೆಂದು ನೀವು ಬಯಸಿದರೆ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸಿ. ಪಾಲಕ್ ಸೊಪ್ಪು, ಸೌತೆಕಾಯಿ, ಕುಂಬಳಕಾಯಿ, ಸೋರೆಕಾಯಿ, ಕೋಸುಗಡ್ಡೆ, ಪುದೀನಾ, ಕ್ಯಾರೆಟ್, ಬಟಾಣಿ ಇತ್ಯಾದಿಗಳನ್ನು ತಪ್ಪದೇ ಕೊಡಿ.

ಕಿತ್ತಳೆ: ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ನೀವು ಮಗುವಿಗೆ ಕಿತ್ತಳೆ ಹಣ್ಣನ್ನು ಕೊಡಬಹುದು. ಕಿತ್ತಳೆಯು ಮೆದುಳಿನ ಕೋಶಗಳಿಗೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್ಗಳನ್ನು ನಾಶಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ದಿನವಿಡೀ ಮಗುವನ್ನು ಶಕ್ತಿಯುತವಾಗಿರಿಸುತ್ತದೆ.

ಧಾನ್ಯಗಳಿಂದ ಮಾಡಿದ ಆಹಾರ: ಧಾನ್ಯಗಳು ಆಹಾರದ ಅತಿ ದೊಡ್ಡ ಮೂಲ. ಧಾನ್ಯಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಕೊಡಿ. ಮಗುವಿನ ಆಹಾರದಲ್ಲಿ ಧಾನ್ಯಗಳನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ. ಇದು ಮಕ್ಕಳ ಮನಸ್ಸಿಗೆ ನಿರಂತರ ಶಕ್ತಿಯನ್ನು ನೀಡುತ್ತದೆ. ರಕ್ತನಾಳಗಳಲ್ಲಿ ಗ್ಲೂಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುತ್ತದೆ.

ವಾಲ್ನಟ್‌ ಮತ್ತು ಬಾದಾಮಿ : ವಾಲ್‌ನಟ್ಸ್ ಮತ್ತು ಬಾದಾಮಿ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಮೆದುಳಿಗೆ ಹಾನಿ ಮಾಡುವ ಜೀವಕೋಶಗಳೊಂದಿಗೆ ಹೋರಾಡುತ್ತವೆ. ಮೆದುಳಿನ ಆರೋಗ್ಯವನ್ನು ಉತ್ತೇಜಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...