
ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡುವುದು ಅತ್ಯಂತ ಅವಶ್ಯಕ. ನಿದ್ರೆಯ ಕೊರತೆಯಿಂದ ಹಲವು ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಬೊಜ್ಜಿನ ಸಮಸ್ಯೆಗೂ ಇದೇ ಕಾರಣ. ಒಮ್ಮೊಮ್ಮೆ ಕಣ್ತುಂಬಾ ನಿದ್ದೆ ಬಾರದೇ ಇರಲು ಕಾರಣ ನಾವು ತಿನ್ನುವ ಆಹಾರ. ಹಾಗಾಗಿ ಆಹಾರ ಪದ್ಧತಿ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ.
ಉತ್ತಮ ಆರೋಗ್ಯಕ್ಕೂ ನಿದ್ದೆಗೂ ಅವಿನಾಭಾವ ಸಂಬಂಧವಿದೆ. ನಿದ್ರೆಯ ಕೊರತೆಯಿಂದಾಗಿ ಹೃದ್ರೋಗಗಳು ಬರಬಹುದು, ರೋಗ ನಿರೋಧಕ ಶಕ್ತಿ ದುರ್ಬಲವಾಗಬಹುದು. ಸ್ತನ ಕ್ಯಾನ್ಸರ್, ಖಿನ್ನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಮಲಗುವ ಮುನ್ನ ಅನಾರೋಗ್ಯಕರ ಆಹಾರವನ್ನು ಸೇವಿಸಬೇಡಿ.
ಕೆಫೀನ್ ಯುಕ್ತ ಪಾನೀಯ : ಕೆಫೀನ್ ಸೇವನೆ ನಿದ್ದೆಯನ್ನು ಹಾಳು ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆ ಮಾಡಬೇಡಿ. ಚಹಾ, ಕಾಫಿ ಮತ್ತು ವಿವಿಧ ತಂಪು ಪಾನೀಯಗಳಲ್ಲಿ ಕೆಫೀನ್ ಇರುತ್ತದೆ. ಚಾಕಲೇಟ್ ಮತ್ತು ಪೇಯ್ನ್ ಕಿಲ್ಲರ್ ಗಳಲ್ಲಿಯೂ ಇದನ್ನು ಬಳಸ್ತಾರೆ. ಹಾಗಾಗಿ ಮಲಗುವ ಮುನ್ನ ಇಂತಹ ಯಾವುದೇ ಪದಾರ್ಥಗಳನ್ನು ಸೇವಿಸಬೇಡಿ.
ಟೊಮ್ಯಾಟೋ : ಮಲಗುವ ಮುನ್ನ ಟೊಮ್ಯಾಟೊ ತಿನ್ನುವುದು ಕೂಡ ನಿಮ್ಮ ನಿದ್ರೆಗೆ ಒಳ್ಳೆಯದಲ್ಲ. ಟೊಮ್ಯಾಟೋಗಳು ರಿಫ್ಲೆಕ್ಸ್‌ಗೆ ಕಾರಣವಾಗಬಹುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ರಾತ್ರಿಯಲ್ಲಿ ಟೊಮೆಟೊ ಸೇವನೆಯು ಚಡಪಡಿಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ನೀವು ಶಾಂತವಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.
ಈರುಳ್ಳಿ: ರಾತ್ರಿ ಈರುಳ್ಳಿ ತಿಂದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ. ಈರುಳ್ಳಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಒತ್ತಡ ಉಂಟು ಮಾಡಬಹುದು. ಹಸಿ ಅಥವಾ ಬೇಯಿಸಿದ ಈರುಳ್ಳಿಯನ್ನು ರಾತ್ರಿ ತಿನ್ನದೇ ಇರುವುದು ಉತ್ತಮ.