alex Certify ಕೋಪ ಕಡಿಮೆ ಮಾಡಿಕೊಳ್ಳಲು ಬಯಸುತ್ತೀರಾ ? ಹಾಗಾದ್ರೆ ಈ ಸರಳ ಸಲಹೆ ಪಾಲಿಸಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಪ ಕಡಿಮೆ ಮಾಡಿಕೊಳ್ಳಲು ಬಯಸುತ್ತೀರಾ ? ಹಾಗಾದ್ರೆ ಈ ಸರಳ ಸಲಹೆ ಪಾಲಿಸಿ…!

 

ಕೋಪವು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತದೆ. ಕೋಪದ ಕೈಗೆ ಬುದ್ಧಿ ಕೊಡಬಾರದು ಅನ್ನೋ ಮಾತೇ ಇದೆ. ಕೋಪವು ನಮ್ಮನ್ನು ಒಳಗಿನಿಂದಲೇ ನಾಶ ಮಾಡಿಬಿಡುತ್ತದೆ. ಕೋಪ ಮನುಷ್ಯನ ಶತ್ರು. ಇದು ಸಂಬಂಧಗಳನ್ನು ಹಾಳುಮಾಡುತ್ತದೆ. ಹಾಗಾಗಿ ಸಿಟ್ಟನ್ನು ಆದಷ್ಟು ನಿಯಂತ್ರಿಸಿಕೊಳ್ಳುವುದು ಬಹಳ ಮುಖ್ಯ.

ಮೌನವಾಗಿರಿ

ಕೋಪಗೊಂಡ ವ್ಯಕ್ತಿ ಯಾರ ಮಾತನ್ನೂ ಕೇಳುವುದಿಲ್ಲ ಮತ್ತು ತನಗೆ ಸರಿ ಎನಿಸಿದ್ದನ್ನು ಮಾಡುತ್ತಾರೆ. ಈ ಸಮಯದಲ್ಲಿ ಉತ್ತಮ ಸಂಬಂಧ ಕೂಡ ಹಾಳಾಗುತ್ತದೆ. ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ತಿಳುವಳಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅತಿಯಾದ ಕೋಪವು ಆರೋಗ್ಯಕ್ಕೆ ಕೂಡ ಹಾನಿಕರ. ಕೋಪವನ್ನು ಶಮನಗೊಳಿಸಲು ಬಯಸಿದರೆ ಸ್ವಲ್ಪ ಸಮಯ ಮೌನವಾಗಿರಿ. ಕೋಪದಲ್ಲಿ ತಪ್ಪು ಕೆಲಸ ಮಾಡುವುದಕ್ಕಿಂತ ಮೌನವಾಗಿರುವುದು ಉತ್ತಮ.

ಜಾಗ ಬದಲಾವಣೆ

ಕೋಪದಲ್ಲಿ ತಪ್ಪು ಪದಗಳನ್ನು ಬಳಸುವುದು ಸಮಸ್ಯೆಗಳನ್ನು ಮಾತ್ರ ಸೃಷ್ಟಿಸುತ್ತದೆ. ಮಾತನಾಡುವುದು ಅನಿವಾರ್ಯವಾದರೆ ಯೋಚಿಸಿ ಮಾತನಾಡಿ. ತುಂಬಾ ಕೋಪ ಬಂದಾಗ ಸ್ವಲ್ಪ ಸಮಯ ಆ ಸ್ಥಳದಿಂದ ದೂರ ಹೋಗಬೇಕು. ಸ್ಥಳ ಬದಲಾಯಿಸುವುದರಿಂದ ಮನಸ್ಸು ಕೂಡ ಶಾಂತವಾಗುತ್ತದೆ. ಓಪನ್‌ ಸ್ಪೇಸ್‌ನಲ್ಲಿ ಒಬ್ಬರೇ ಕುಳಿತುಕೊಳ್ಳಬೇಕು. ಕೋಪ ಕಡಿಮೆಯಾದಾಗ ಬರಬೇಕು.

ಗಮನ ಬದಲಾವಣೆ

ಕೋಪಗೊಂಡಾಗ ದೀರ್ಘವಾಗಿ ಉಸಿರಾಡಿ. ಇದು ಕೋಪವನ್ನು ಬಹಳ ಮಟ್ಟಿಗೆ ಶಾಂತಗೊಳಿಸುತ್ತದೆ. ಕೋಪಗೊಂಡಾಗ ಗಮನವನ್ನು ಬೇರೆಡೆಗೆ ತಿರುಗಿಸಬೇಕು. ಒಬ್ಬರೇ ಇರಬೇಕು. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ. ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ. ಪಾರ್ಕ್‌ನಲ್ಲಿ ಸ್ವಚ್ಛ ಗಾಳಿಯನ್ನು ಆನಂದಿಸಿ.

ಸಂಗೀತ ಕೇಳಿ

ಕೋಪಗೊಂಡಾಗ ನಿಮಗೆ ಇಷ್ಟವಾದ ಕೆಲಸ ಮಾಡಬೇಕು. ನಿಮ್ಮಿಷ್ಟದ ಹಾಡುಗಳನ್ನು ಕೇಳಬಹುದು. ಇದರಿಂದ ಮನಸ್ಸು ಶಾಂತವಾಗುತ್ತದೆ.

ವಿಶ್ರಾಂತಿ ಪಡೆಯಿರಿ

ಸಿಟ್ಟನ್ನು ಕಡಿಮೆ ಮಾಡಲು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಬೇಕು. ನಕ್ಕು ಮನಸ್ಸನ್ನು ಹಗುರಾಗಿಸಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...