
ಅದೇ ರೀತಿ ಅಪ್ರಾಪ್ತ ವಯಸ್ಕರಿಗೆ ಪಿಪಿಎಫ್ ಖಾತೆ ಹೊಂದಬಹುದೇ? ಇಂತದ್ದೊಂದು ಪ್ರಶ್ನೆ ಸಹಜ. ನವೆಂಬರ್ 14 ರಂದು ಮಕ್ಕಳ ದಿನ ಸಂದರ್ಭದಲ್ಲಿ, ಅನೇಕ ಪೋಷಕರು ತಮ್ಮ ಮಗುವಿಗೆ ಭವಿಷ್ಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಿಪಿಎಫ್ ಖಾತೆ ತೆರೆಯಲು ಆಲೋಚಿಸಬಹುದು.
1. ಯಾವುದೇ ವಯಸ್ಕ ವ್ಯಕ್ತಿಯು ತನಗಾಗಿ ಮತ್ತು ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ, ರಕ್ಷಕನಾಗಿ ಪಿಪಿಎಫ್ ಖಾತೆಯನ್ನು ತೆರೆಯಬಹುದು.
2. ಯಾವುದೇ ಅಪ್ರಾಪ್ತ ವಯಸ್ಕನು ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ.
3. ಅಪ್ರಾಪ್ತ ವಯಸ್ಕರ ಪರವಾಗಿ ಪಿಪಿಎಫ್ ಖಾತೆಯನ್ನು ತಂದೆ ಅಥವಾ ತಾಯಿ ತೆರೆಯಬಹುದು. ಇಬ್ಬರೂ ಪೋಷಕರು ಒಂದೇ ಅಪ್ರಾಪ್ತ ವಯಸ್ಕರಿಗೆ ಪ್ರತ್ಯೇಕ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂಬುದು ಗಮನಿಸಬೇಕಾದ ವಿಷಯ.
4. ಒಬ್ಬ ವ್ಯಕ್ತಿಯು ತಾನು ಪೋಷಕನಾಗಿ ಪ್ರತಿಯೊಬ್ಬ ಅಪ್ರಾಪ್ತರ ಪರವಾಗಿ ಒಂದು ಪಿಪಿಎಫ್ ಖಾತೆ ತೆರೆಯಬಹುದು.
5. ಒಂದು ವೇಳೆ ತಂದೆ-ತಾಯಿ ಜೀವಂತವಾಗಿಲ್ಲದಿದ್ದಲ್ಲಿ ಅಥವಾ ಜೀವಂತವಾಗಿರುವ ಏಕೈಕ ಪೋಷಕರು ಕಾರ್ಯನಿರ್ವಹಿಸಲು ಅಸಮರ್ಥರಾಗಿದ್ದರೆ, ಅಪ್ರಾಪ್ತರ ಆಸ್ತಿಯನ್ನು ನೋಡಿಕೊಳ್ಳಲು ಕಾನೂನಿನಡಿಯಲ್ಲಿ ಅರ್ಹರಾಗಿರುವ ವ್ಯಕ್ತಿಯು ಅಂತಹ ಅಪ್ರಾಪ್ತರ ಪರವಾಗಿ ಖಾತೆಯನ್ನು ತೆರೆಯಬಹುದು.
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ?
ಪಿಪಿಎಫ್ಗೆ ಹೂಡಿಕೆಯ ಮಿತಿಯ ಬಗ್ಗೆ ತಿಳಿದಿರಬೇಕಾದ ವಿಚಾರವಿದು. ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಹೂಡಿಕೆ ರೂ.500 ಮತ್ತು ಗರಿಷ್ಠ ಹೂಡಿಕೆ ರೂ.1,50,000 ಪಿಪಿಎಫ್ನಲ್ಲಿ ಹೂಡಿಕೆ ಮಾಡಬಹುದು.
ಅಪ್ರಾಪ್ತ ನಾಮಿನಿಯಾಗಬಹುದೇ ?
ಪಿಪಿಎಫ್ ಅಡಿಯಲ್ಲಿ ನಾಮನಿರ್ದೇಶನ ಲಭ್ಯವಿದೆ. ಇದಲ್ಲದೆ, ಒಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳ ಪರವಾಗಿ ನಾಮನಿರ್ದೇಶನವನ್ನು ಮಾಡಬಹುದು. ಅಪ್ರಾಪ್ತರ ಹೆಸರಿನಲ್ಲಿ ತೆರೆಯಲಾದ ಪಿಪಿಎಫ್ ಖಾತೆಗಳಲ್ಲಿ ನಾಮನಿರ್ದೇಶನ ಮಾಡಲು ಅವಕಾಶ ಇರಲ್ಲ.