ಫಿಟ್ನೆಸ್ ಕಾಪಾಡಿಕೊಳ್ಳಲು ರನ್ನಿಂಗ್ ಅತ್ಯುತ್ತಮವಾದ ವ್ಯಾಯಾಮ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂಬದಿ ಓಟ ಅಥವಾ ಬ್ಯಾಕ್‌ವರ್ಡ್ ರನ್ನಿಂಗ್ ಟ್ರೆಂಡಿಂಗ್‌ನಲ್ಲಿದೆ. ಈ ಮೂಲಕ ತೂಕ ನಿಯಂತ್ರಿಸಲು ಜನರು ಕಸರತ್ತು ಮಾಡ್ತಾರೆ.
ಈ ಬ್ಯಾಕ್‌ವರ್ಡ್ ರನ್ನಿಂಗ್ ಬಹಳ ಆರೋಗ್ಯಕರವಾಗಿದೆ. ಇದರಲ್ಲಿ ವಿಶೇಷ ರೀತಿಯ ಸ್ನಾಯು ಚಲನೆ ಉಂಟಾಗುತ್ತದೆ. ಇದು ಮೆದುಳಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹಾಗಾಗಿಯೇ ಫಿಟ್ ಆಗಿರಲು ಬಯಸುವವರು ಬ್ಯಾಕ್‌ವರ್ಡ್ ರನ್ನಿಂಗ್ ಮಾಡುತ್ತಾರೆ. ಇದರಿಂದ ಊತ ಕೂಡ ಬಹಳ ವೇಗವಾಗಿ ಕಡಿಮೆಯಾಗುತ್ತದೆ.
ಬ್ಯಾಕ್‌ವರ್ಡ್ ರನ್ನಿಂಗ್‌ನಿಂದ ಕ್ರೀಡಾಪಟುಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಎಲ್ಲರೂ ಮುಂದೆ ಮುಂದೆ ಓಡಿದರೆ ಹಿಮ್ಮುಖವಾಗಿ ಓಡುತ್ತಾರೆ. ಸಂಶೋಧನೆಯ ಪ್ರಕಾರ ಫಾರ್ವರ್ಡ್ ಓಟಕ್ಕಿಂತ ಹಿಮ್ಮುಖ ಓಟವು ಉತ್ತಮ. ಈ ಮೂಲಕ ಬಹಳ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.