ತೂಕ ಇಳಿಸಲು ಜನರು ಹರಸಾಹಸ ಪಡುತ್ತಾರೆ. ವ್ಯಾಯಾಮ, ಯೋಗ, ಡಯೆಟ್ ಗಳ ಜೊತೆಗೆ ಗ್ರೀನ್ ಟೀ, ಬ್ಲ್ಯಾಕ್ ಕಾಫಿ, ಟೀ ಕುಡಿಯುವುದರ ಮೂಲಕ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಬ್ಲ್ಯಾಕ್ ಕಾಫಿ ಸೇವಿಸಿ ತೂಕ ಇಳಿಸಿಕೊಳ್ಳುವವರು ಈ ಟಿಪ್ಸ್ ಫಾಲೋ ಮಾಡಿದರೆ ಬಹಳ ಬೇಗ ತೂಕ ಇಳಿಸಿಕೊಳ್ಳಬಹುದು.
ಕಾಫಿಯಲ್ಲಿ ಆಮ್ಲವಿದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದರ ಮೂಲಕ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ. ಹಾಗೇ ನಿಂಬೆ ರಸ ಕೂಡ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ.
ಹಾಗಾಗಿ ತೂಕವನ್ನು ಬೇಗನೆ ಕಡಿಮೆ ಮಾಡಲು ಬಯಸುವವರು ಈ ಬ್ಲ್ಯಾಕ್ ಕಾಫಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ತೂಕ ಇಳಿಕೆಯಾಗುತ್ತದೆ.