alex Certify ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಫಾಲೋ ಮಾಡಿ ಈ ಟಿಪ್ಸ್

ಬದಲಾದ ಜೀವನ ಶೈಲಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಅಧಿಕ ಬೊಜ್ಜು, ಆಯಾಸ, ಕಣ್ಣು ಮಂಜಾಗುವುದು, ಕೂದಲು ಉದುರುವುದು ಹೀಗೆ ಅನೇಕ ಸಮಸ್ಯೆ ಕಾಡಲು ಶುರುವಾಗಿದೆ. ಮತ್ತೊಂದು ಸಮಸ್ಯೆ ಅಂದರೆ ಸಣ್ಣ ವಯಸ್ಸಿನಲ್ಲಿ ಹೆಚ್ಚು ವಯಸ್ಸಾದಂತೆ ಕಾಣುವುದು.

ವಯಸ್ಸು ಹೆಚ್ಚಾಗುವುದು ದೇಹದಲ್ಲಿ ಕಾಣಿಸುತ್ತದೆ. ಆದ್ರೆ 35-40 ನೇ ವಯಸ್ಸಿನಲ್ಲೇ 50 ವರ್ಷ ವಯಸ್ಸಾದಂತೆ ಕಂಡ್ರೆ, ಅದು ಕಳವಳಕಾರಿ ಸಂಗತಿ. ಕೆಟ್ಟ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತಿದೆ.

ಚಿಕ್ಕ ವಯಸ್ಸಿನಲ್ಲಿಯೇ, ಮುಖದ ಮೇಲೆ ಸುಕ್ಕು, ಬಿಳಿ ಕೂದಲಿನ ಸಮಸ್ಯೆ  ಮುಜುಗರಕ್ಕೆ ಕಾರಣವಾಗ್ತಿದೆ. ಕೆಲ ಟಿಪ್ಸ್ ಮೂಲಕ ಈ ಸಮಸ್ಯೆಗೆ ನೀವು ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಒಣ ಚರ್ಮ ಮತ್ತು ಸುಕ್ಕು : ಒಣ ಚರ್ಮ ಮತ್ತು ಸುಕ್ಕು  ವಯಸ್ಸಾಗುವ ಲಕ್ಷಣವಾಗಿದೆ. ಇದನ್ನು ತಡೆಯಲು ಜನರು ದುಬಾರಿ ಲೋಷನ್ ಮತ್ತು ಕ್ರೀಮ್ ಬಳಸ್ತಾರೆ. ವೈದ್ಯಕೀಯ ತಜ್ಞರ ಪ್ರಕಾರ, ಮುಖದ ಸುಕ್ಕುಗಳು ಮತ್ತು ಒಣ ಚರ್ಮಕ್ಕೆ ಡಿ-ಹೈಡ್ರೇಶನ್ ದೊಡ್ಡ ಕಾರಣವಾಗಿದೆ. ಇದನ್ನು ತಪ್ಪಿಸಲು, ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ವಾಲ್ನಟ್ಸ್ ಬಳಕೆ ಮತ್ತು ತೆಂಗಿನ ಎಣ್ಣೆಯ ಬಳಕೆಯಿಂದ ಮುಖದ ಸುಕ್ಕುಗಳು ನಿವಾರಣೆಯಾಗುತ್ತವೆ. ಪಾಲಕ್ ನಂತಹ ಹಸಿರು ಸೊಪ್ಪು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಬಹುದು.

ಮಾಂಸ, ಮೀನು, ಕೆಲವು ಧಾನ್ಯಗಳೊಂದಿಗೆ ಆಲ್ಕೋಹಾಲ್ ಮತ್ತು ಚಿಪ್ಸ್ ನಂತಹ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಈ ಕಾರಣಗಳಿಂದಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ. ಇದು ಮುಖದ ಮೇಲೆ ಸುಕ್ಕುಗಳನ್ನು ಹೆಚ್ಚಿಸುತ್ತದೆ.

ದೃಷ್ಟಿ ದೋಷ: ಸಾಮಾನ್ಯವಾಗಿ ವಯಸ್ಸಾದಂತೆ ದೃಷ್ಟಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಆದರೀಗ ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ಮಂದಗೊಳ್ಳುವ ಸಾಧ್ಯತೆಗಳು ಹೆಚ್ಚಾಗ್ತಿವೆ. ಇದಕ್ಕೆ ಕಾರಣವೆಂದರೆ ಕಣ್ಣುಗಳ ಸ್ನಾಯುಗಳು ದುರ್ಬಲವಾಗುವುದು. ಈ ಸಮಸ್ಯೆಯನ್ನು ನಿಭಾಯಿಸಲು ಮೊಟ್ಟೆ ಬೆಸ್ಟ್.

ಕಿತ್ತಳೆ ಸೇರಿದಂತೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಸೇವನೆ ಮಾಡಬೇಕು. ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಪಾಲಕ್ ಮತ್ತು ಇತರ ಹಸಿರು ಎಲೆಗಳು ಕಣ್ಣಿನ ಶಕ್ತಿಗಳನ್ನು ಹೆಚ್ಚಿಸುತ್ತವೆ. ಬಾದಾಮಿ, ಪಿಸ್ತಾ ಮತ್ತು ವಾಲ್ನಟ್ಸ್ ನಂತಹ ಬೀಜಗಳನ್ನು ಕೂಡ ಸೇವಿಸಬಹುದು.

ಕೂದಲಿನ ಬಣ್ಣ : 35 ವರ್ಷ ದಾಟಿದ ನಂತರ ತಲೆಯ ಕೂದಲು ಬಿಳಿಯಾಗಲು ಆರಂಭವಾಗುತ್ತದೆ. ಜನರು ತಮ್ಮ ಕೂದಲಿಗೆ ಬಣ್ಣ ಹಚ್ಚುವ ಮೂಲಕ ತಮ್ಮ ವಯಸ್ಸನ್ನು ಮರೆಮಾಚಲು ಪ್ರಯತ್ನಿಸುತ್ತಾರೆ. ಇದು ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಕೂದಲಿಗೆ ಬಣ್ಣ ಹಾಕುವ ಬದಲು ಟ್ಯಾಂಗರಿನ್ ತಿನ್ನುವುದು ಉತ್ತಮ. ಟ್ಯಾಂಗರಿನ್ ಗಳು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಡಾರ್ಕ್ ಚಾಕೊಲೇಟ್ ಕೂಡ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಚಾಕಲೇಟ್ ಗಳು ಕಬ್ಬಿಣ ಮತ್ತು ತಾಮ್ರದ ಉತ್ತಮ ಮೂಲವಾಗಿದೆ.

ಕೀಲು ನೋವು :  ವಯಸ್ಸಾದಂತೆ ತಲೆ, ಮೊಣಕಾಲು, ಭುಜ, ಸೊಂಟದಂತಹ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ. 40 ವರ್ಷದ ನಂತರ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಯಿಂದ ತಪ್ಪಿಸಲು ಚಹಾ ಮತ್ತು ಕಾಫಿ ಬಳಕೆಯನ್ನು ಕಡಿಮೆ ಮಾಡಿ. ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಹೆಚ್ಚಾಗಿರುವುದರಿಂದ ಇದರ ಸೇವನೆ ದೇಹದ ಕೀಲುಗಳನ್ನು ದುರ್ಬಲಗೊಳಿಸುತ್ತದೆ. ಸಂಧಿವಾತದ ನೋವನ್ನು ನಿವಾರಿಸಲು ಕರಿದ ಮೀನು ಅಥವಾ ಮೊಟ್ಟೆಗಳನ್ನು ತಿನ್ನಬೇಕು. ಶುಂಠಿ, ಬೆರಿಹಣ್ಣುಗಳು ಅಥವಾ ಸ್ಟ್ರಾಬೆರಿಗಳನ್ನು ತಿನ್ನಬಹುದು. ಈ ಹಣ್ಣುಗಳ ಸೇವನೆಯಿಂದ ದೇಹದ ಕೀಲುಗಳು ಬಲಗೊಳ್ಳುತ್ತವೆ.

ಕೂದಲು ಉದುರುವಿಕೆ : ನೆತ್ತಿಯ ಮೇಲೆ ಕೂದಲು ಉದುರುವುದನ್ನು ವೃದ್ಧಾಪ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಸಂಪೂರ್ಣವಾಗಿ ಸತ್ಯವಲ್ಲ. ಕೆಟ್ಟ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಲು ಆರಂಭವಾಗುತ್ತದೆ. ಜನರು ತಲೆಯ ಕೂದಲನ್ನು ಬಲಪಡಿಸಲು ಮೀನು, ಚೀಸ್ ಅಥವಾ ಮಾಂಸವನ್ನು ತಿನ್ನುವುದು ಒಳ್ಳೆಯದು. ಜೊತೆಗೆ ಕಿತ್ತಳೆ, ಸಿಹಿ ಗೆಣಸು, ಮಾವನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ತೂಕ ಹೆಚ್ಚಳ : ಹೆಚ್ಚುತ್ತಿರುವ ಜವಾಬ್ದಾರಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ, 35-40 ವರ್ಷಗಳ ನಂತರ  ತೂಕ ಹೆಚ್ಚಾಗುವುದು ಸಾಮಾನ್ಯ. ದೇಹದ ತೂಕ ಹೆಚ್ಚಾದರೆ ವ್ಯಕ್ತಿಯು ಸಮಯಕ್ಕಿಂತ ಮುಂಚೆಯೇ ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತಾನೆ. ಸ್ಥೂಲಕಾಯಕ್ಕೆ ಅತಿದೊಡ್ಡ ಕಾರಣ ಕೊಬ್ಬಿನ ಹೆಚ್ಚಳ. ಕೊಬ್ಬನ್ನು ಕಡಿಮೆ ಮಾಡಲು ಪ್ರತಿ ನಿತ್ಯ ಸೇವಿಸುವ ಆಹಾರದಲ್ಲಿ ಶೇಕಡಾ 40 ರಷ್ಟು ಆಹಾರ ನೀರಿನಾಂಶವನ್ನು ಹೊಂದಿರಬೇಕು. ಜ್ಯೂಸ್ ಹೆಚ್ಚು ಸೇವನೆ ಮಾಡಬೇಕು. ಸಂಜೆ 4 ಗಂಟೆಯ ಮೊದಲು ಯಾವುದೇ ಸಿಹಿ ಪದಾರ್ಥ ಅಥವಾ ಅಧಿಕ ಆಹಾರವನ್ನು ಸೇವನೆ ಮಾಡಬಾರದು. ಸರಿಯಾಗಿ ನಿದ್ರೆ ಮಾಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...