ಚುಮು ಚುಮು ಚಳಿಯಲ್ಲಿ ತಣ್ಣಗಿನ ನೀರು ಕುಡಿಯೋದು ಕಷ್ಟ. ಹಾಗಾಗಿಯೇ ಹೆಚ್ಚಿನ ಜನರು ಬಿಸಿ ನೀರನ್ನೇ ಕುಡಿಯುತ್ತಾರೆ. ಬಿಸಿ ಬಿಸಿ ನೀರಲ್ಲೇ ಸ್ನಾನ ಕೂಡ ಮಾಡ್ತಾರೆ. ಚಳಿಗಾಲದಲ್ಲಿ ಬಿಸಿನೀರು ಮ್ಯಾಜಿಕ್ ಮಾಡುತ್ತದೆ. ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಶೀತ ಮತ್ತು ಕೆಮ್ಮು ಬರುವ ಅಪಾಯ ಕಡಿಮೆಯಾಗುತ್ತದೆ. ಇದು ಬ್ಯಾಕ್ಟೀರಿಯಾ ದಾಳಿಯಿಂದ ಗಂಟಲನ್ನು ರಕ್ಷಿಸುತ್ತದೆ. ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಈ ಕಾರಣದಿಂದಾಗಿ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ.
ಬಿಸಿನೀರಿನ ಪ್ರಯೋಜನಗಳು
ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ, ದೇಹದ ಚಯಾಪಚಯ ಸರಿಯಾಗಿರುತ್ತದೆ. ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬು ಕೂಡ ವೇಗವಾಗಿ ಕರಗಲು ಪ್ರಾರಂಭಿಸುತ್ತದೆ. ಬಿಸಿನೀರು ಕುಡಿಯುವ ಮೂಲಕ ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಬಿಸಿನೀರು ಮೂತ್ರಪಿಂಡದ ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನೂ ನಿವಾರಿಸುತ್ತದೆ.
ದಿನನಿತ್ಯ ಬಿಸಿನೀರು ಕುಡಿದರೆ ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸಿಕೊಳ್ಳಬಹುದು. ಇದು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಚರ್ಮವನ್ನು ಯಂಗ್ ಆಗಿಸಲು ಬಿಸಿನೀರು ಸಹಕಾರಿ. ಹಾಗಾಗಿ ಸದಾ ಯಂಗ್ ಆಗಿಯೇ ಕಾಣಬೇಕೆಂಬ ಆಸೆ ಇದ್ದರೆ ಬಿಸಿನೀರನ್ನು ಕುಡಿಯಿರಿ. ಬಿಸಿನೀರು ದೇಹದ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯೂ ನಿವಾರಣೆಯಾಗುತ್ತದೆ.
ನೀವು ಪ್ರತಿದಿನ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ, ದೇಹದ ರಕ್ತ ಪರಿಚಲನೆ ಸುಗಮವಾಗಿರುತ್ತದೆ. ದೇಹದ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಬಿಸಿನೀರು ಸ್ನಾನ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಬಿಸಿನೀರು ಕೂದಲಿನ ಬೆಳವಣಿಗೆಗೆ ಒಳ್ಳೆಯದು, ಕೂದಲಿಗೆ ಇದು ಹೊಳಪನ್ನು ತರುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಕೂಡ ಮಾಡಬಹುದು.