
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರು ಕೆಲಸದ ಒತ್ತಡದಿಂದ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಇದರಿಂದ ಅವರ ದಾಂಪತ್ಯ ಜೀವನವು ನೀರಸವಾಗಿದೆ. ಹಾಗಾದ್ರೆ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಬೀಟ್ ರೋಟ್ ಸಹಕಾರಿಯೇ? ಎಂಬುದನ್ನು ತಿಳಿಯಿರಿ.
ಒತ್ತಡದ ಜೀವನಶೈಲಿಯಿಂದಾಗಿ ಪುರುಷರಲ್ಲಿ ರಕ್ತದ ಪರಿಚಲನೆಯಲ್ಲಿ ಅಡಚಣೆ ಉಂಟಾಗುತ್ತಿದೆ. ಇದರಿಂದ ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆ ಕಾಡುತ್ತಿದೆ. ಇದರಿಂದ ಅವರಿಗೆ ಲೈಂಗಿಕತೆಯ ಸುಖವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಬೀಟ್ ರೋಟ್ ರಸವನ್ನು ಸೇವಿಸಿ.
ಬೀಟ್ ರೋಟ್ ಅನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ನೈಟ್ರಿಕ್ ಆಕ್ಸೈಡ್ ಸಿಗುತ್ತದೆ. ಇದು ನರಗಳ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ಜನನಾಂಗದ ಕಡೆಗೆ ಹೆಚ್ಚು ರಕ್ತ ಸಂಚಾರವಾಗುತ್ತದೆ. ಇದರಿಂದ ಲೈಂಗಿಕ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.
ಅಲ್ಲದೇ ಬಿಟ್ ರೋಟ್ ಲೈಂಗಿಕ ಹಾರ್ಮೋನ್ ಗಳನ್ನು ಹೆಚ್ಚಿಸುತ್ತದೆ. ಬೀಟ್ ರೋಟ್ ನಲ್ಲಿ ಬೋರಾನ್ ಎಂಬ ಅಂಶವಿದೆ. ಇದು ಹಾರ್ಮೋನ್ ಗಳ ಅಸಮತೋಲನವನ್ನು ನಿವಾರಿಸುತ್ತದೆ. ಇದರಿಂದ ಲೈಂಗಿಕ ಬಯಕೆ ಹೆಚ್ಚಾಗುತ್ತದೆ.