alex Certify ಮೊಡವೆ ತ್ವಚೆಯಿಂದ ಮುಕ್ತಿ ಬೇಕಾ…….? ನಿಮ್ಮ ಜೀವನ ಕ್ರಮದಲ್ಲಿ ಮಾಡಿ ಈ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಡವೆ ತ್ವಚೆಯಿಂದ ಮುಕ್ತಿ ಬೇಕಾ…….? ನಿಮ್ಮ ಜೀವನ ಕ್ರಮದಲ್ಲಿ ಮಾಡಿ ಈ ಬದಲಾವಣೆ

ಮೊಡವೆ ಎಂಬುದು ಸಾಮಾನ್ಯವಾದ ತ್ವಚೆ ಸಂಬಂಧಿ ಸಮಸ್ಯೆಯಾಗಿದೆ. ಇದು ಯಾರಿಗೆ ಬೇಕಾದರೂ ಯಾವುದೇ ಸಂದರ್ಭದಲ್ಲೂ ಉಂಟಾಗಿಬಿಡಬಹುದು. ಕೆಲವೊಂದು ಸಂದರ್ಭಗಳಲ್ಲಿ ಈ ಮೊಡವೆಗಳು ಮಾಯವಾದರೂ ಸಹ ಮುಖದ ಮೇಲೆ ಕಲೆಯನ್ನು ಹಾಗೆಯೇ ಉಳಿಸಿಬಿಡುತ್ತವೆ.

ನೀವು ಕೂಡ ಇಂತದ್ದೇ ಸಮಸ್ಯೆಯಿಂದ ಬಳಲುತ್ತಿರುವವರಾಗಿದ್ದರೆ ಈ ಮೊಡವೆ ಸಮಸ್ಯೆಯಿಂದ ಪಾರಾಗಲು ನೀವು ಮೂರು ಮುಖ್ಯ ಅಂಶಗಳನ್ನು ಪಾಲಿಸಲೇಬೇಕಿದೆ. ವಿವಿಧ ಔಷಧಿಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಮುನ್ನ ನೀವು ನಿಮ್ಮ ನಿತ್ಯ ಜೀವನ ಕ್ರಮದಲ್ಲಿ ಬದಲಾವಣೆಗಳನ್ನು ತಂದುಕೊಟ್ಟಲ್ಲಿ ಮೊಡವೆ ತನ್ನಿಂದ ತಾನೆ ಮಾಯವಾಗಲಿದೆ.

ಒಳ್ಳೆಯ ಆಹಾರ :

ಸಾಕಷ್ಟು ಅಧ್ಯಯನಗಳು ನೀಡಿರುವ ಮಾಹಿತಿಯ ಪ್ರಕಾರ ನೀವು ಸೇವಿಸುವ ಆಹಾರವು ನಿಮ್ಮ ಮುಖದ ಮೇಲಿನ ಮೊಡವೆಗಳ ಮೇಲೆ ನೇರ ಪರಿಣಾಮವನ್ನು ಹೊಂದಿದೆ.

ಅತಿಯಾದ ಸಕ್ಕರೆ ಅಂಶ, ಕೊಬ್ಬಿನಂಶ ಹಾಗೂ ಡೈರಿ ಉತ್ಪನ್ನಗಳು ಹೊಂದಿರುವ ಆಹಾರಗಳ ಸೇವನೆಯಿಂದ ಮೊಡವೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಎಲ್ಲರ ದೇಹಕ್ಕೂ ಇದು ಅನ್ವಯವಾಗುತ್ತೆ ಎಂದೇನಲ್ಲ. ನಿಮಗೆ ಮೊಡವೆ ಉಂಟಾದರೆ ಇದೇ ಆಹಾರಗಳನ್ನು ಸೇವಿಸಿದರೂ ನಿಮ್ಮ ಸ್ನೇಹಿತೆಗೆ ಮೊಡವೆ ಉಂಟಾಗದೇ ಇರಬಹುದು. ಆದರೆ ಯಾರ ಮುಖದಲ್ಲಿ ಬೇಗನೆ ಮೊಡವೆ ಉಂಟಾಗುವ ಸಾಧ್ಯತೆ ಹೆಚ್ಚಿದೆಯೋ ಅವರು ಇಂತಹ ಆಹಾರಗಳನ್ನು ತ್ಯಜಿಸುವುದು ಉತ್ತಮ. ಯಾವ ಆಹಾರದಲ್ಲಿ ವಿಟಮಿನ್​ ಎ ಹಾಗೂ ಇ ಅಂಶ ಹೆಚ್ಚಿದ್ದರೆ ಮೊಡವೆ ಶಮನವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮೊಡವೆ ತ್ವಚೆಯನ್ನು ಹೊಂದಿರುವವರು ಮುಖಕ್ಕೆ ಹಚ್ಚುವ ಕ್ರೀಮ್​ಗಳನ್ನು ಆಯ್ಕೆ ಮಾಡುವ ಮುನ್ನ ತುಂಬಾನೇ ಎಚ್ಚರಿಕೆಯಿಂದಿರೋದು ಮುಖ್ಯ. ಆಯಿಲ್​ ಫ್ರೀ ಎಂದು ನಮೂದಾಗಿರುವ ಉತ್ಪನ್ನಗಳು ನಿಮಗೆ ಹೊಂದುವುದಿಲ್ಲ.

ಇವನ್ನೆಲ್ಲ ಮಾಡಿದ ಬಳಿಕವೂ ಮೊಡವೆ ಸಮಸ್ಯೆಯಲ್ಲಿ ಯಾವುದೇ ಬದಲಾವಣೆಗಳು ಉಂಟಾಗಿಲ್ಲವಾದಲ್ಲಿ ನೀವು ಚರ್ಮರೋಗ ತಜ್ಞರನ್ನು ಭೇಟಿಯಾಗೋದು ಸೂಕ್ತ. ಇಲ್ಲಿ ನಿಮಗೆ ನಿರ್ದಿಷ್ಟ ಪರಿಹಾರ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...