alex Certify ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸ್ತಿರಾ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಬಯಸ್ತಿರಾ…? ಇಲ್ಲಿದೆ ಮಾಹಿತಿ

ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಬಯಸುವಿರಾದರೆ ಇಲ್ಲಿದೆ ಸರಳ ವಿಧಾನ ತಿಳಿಸುವ ಮಾಹಿತಿ. ಪ್ರಸಕ್ತ ಆರ್ಥಿಕ ವರ್ಷವು ಮಾರ್ಚ್ 31ರಂದು ಕೊನೆಗೊಳ್ಳಲಿರುವುದರಿಂದ ಜನರು ತಮ್ಮ ಎಲ್ಲಾ ಹಣಕಾಸಿನ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅಂತಹ ಕಾರ್ಯಗಳಲ್ಲಿ ಪಿಎಫ್ ಖಾತೆಯನ್ನು ನಿರ್ವಹಿಸುವುದು ಸಹ ಒಂದು.

ಇಪಿಎಫ್ ಚಂದಾದಾರರು ಇದರ ಬಗ್ಗೆ ಮಾಹಿತಿ ಪಡೆಯಲು ಆರ್ಥಿಕ ವರ್ಷದ ಅಂತ್ಯದವರೆಗೆ ಕಾಯಬೇಕಾಗಿಲ್ಲ. ಇಂಟರ್ನೆಟ್ ಮೂಲಕ ಖಾತೆಯೊಳಗೆ ಪ್ರವೇಶಿಸಿ ಪಿಎಫ್ ಬ್ಯಾಲೆನ್ಸ್ ಸೇರಿದಂತೆ ಇತರ ಮಾಹಿತಿ ಪಡೆಯಬಹುದು. ಸದಸ್ಯರು ತಮ್ಮ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ನಾಲ್ಕು ವಿಭಿನ್ನ ರೀತಿಯಲ್ಲಿ ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದೆ.

ನಕಲಿ ಅಂಕಪಟ್ಟಿ ನೀಡಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಪಡೆಯಲು ಯತ್ನ; ಯುವಕನ ವಿರುದ್ಧ ದೂರು ದಾಖಲು

ಉದ್ಯೋಗದಾತರು ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಸಕ್ರಿಯಗೊಳಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇಡೀ ಇಪಿಎಫ್ ಸೇವಾ ವಿಧಾನವನ್ನು ಈಗ ಆನ್‌ಲೈನ್‌ನಲ್ಲಿ ನಡೆಸಲಾಗಿರುವುದರಿಂದ ಯುಎಎನ್ ನಂಬರ್ ನಿರ್ಣಾಯಕ.

1. ಪಿಎಫ್ ಖಾತೆದಾರರು ತಮ್ಮ ಫೋನ್‌ಗಳಲ್ಲಿ UMANG ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಮೊದಲು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

2. ಇಪಿಎಫ್ ಪೋರ್ಟಲ್ ಮೂಲಕ ಪರಿಶೀಲಿಸಲು ಬಯಸುವ ಚಂದಾದಾರರು epfindia.gov.in/site_en/index.php ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.

– ಪೋರ್ಟಲ್‌ಗೆ ಲಾಗ್‌ಇನ್ ಮಾಡಿ ಮತ್ತು ‘ಅವರ್ ಸರ್ವೀಸ್’ ಗೆ ಹೋಗಬೇಕು.

– ಸ್ಕ್ರಾಲ್ ಮಾಡಿ ‘ಫಾರ್ ಎಂಪ್ಲಾಯೀಸ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

– ‘ಮೆಂಬರ್ ಪಾಸ್‌ಬುಕ್’ ಆಯ್ಕೆಯ ಅಡಿಯಲ್ಲಿ, ‘ಸೇವೆಗಳು’ ಮೇಲೆ ಟ್ಯಾಪ್ ಮಾಡುವುದು.

– ನಂತರ https://passbook.epfindia.gov.in/MemberPassBook/Login ಗೆ ಹೋಗುತ್ತದೆ.

3. 7738299899 ಗೆ SMS ಕಳುಹಿಸುವ ಮೂಲಕ ಪಿಎಫ್ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು.

ಸಂದೇಶವನ್ನು EPFOHO UAN ENG ಎಂದು ಫಾರ್ಮ್ಯಾಟ್ ಮಾಡಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಎಸ್ ಎಂಎಸ್ ಕಳುಹಿಸುವ ಅಗತ್ಯವಿದೆ.

ಬಳಕೆದಾರರು ಇಪಿಎಫ್ಒ ​​ಮಿಸ್ಡ್ ಕಾಲ್ ಸೇವೆಯನ್ನು ಬಳಸಬಹುದು ಮತ್ತು ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬಹುದು.

ಮಿಸ್ಡ್ ಕಾಲ್ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಲ್ಲಾ ಪಿಎಫ್ ವಿವರಗಳನ್ನು ಕಳಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...