ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಂದು ಸಣ್ಣ ಉಳಿತಾಯ ಯೋಜನೆ ಎನಿಸಿದರೂ ಗಮನಾರ್ಹ ಮತ್ತು ಅಪಾಯ ಮುಕ್ತ ಆದಾಯ ತಂದುಕೊಡಲಿದೆ. ಜೊತೆಗೆ ಆದಾಯವು ತೆರಿಗೆ ಮುಕ್ತವಾಗಿರಲಿದೆ
ಪಿಪಿಎಫ್ ನಿಯಮಗಳು 1.5 ಲಕ್ಷ ರೂ.ವರೆಗಿನ ವಾರ್ಷಿಕ ಹೂಡಿಕೆಯು ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಕ್ರೆಡಿಟ್‌ಗೆ ಅರ್ಹತೆ ಪಡೆಯುತ್ತದೆ. ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಪಿಪಿಎಫ್ ಬಡ್ಡಿ ದರವನ್ನು ಸರಿಹೊಂದಿಸುತ್ತದೆ. ಪ್ರಸ್ತುತ ತ್ರೈಮಾಸಿಕದಲ್ಲಿ ಪಿಪಿಎಫ್ 7.1 ಪ್ರತಿಶತ ರಿಟರ್ನ್ಸ್ ನೀಡುತ್ತದೆ.
ಪ್ರಸ್ತುತ ಬಡ್ಡಿದರ 7.1 ಪ್ರತಿಶತವು ಕಾಲಾನಂತರದಲ್ಲಿ ಸ್ಥಿರವಾಗಿರುತ್ತದೆ ಎಂದು ನಾವು ಭಾವಿಸಿದಲ್ಲಿ ಒಬ್ಬರು ನಿವೃತ್ತಿಯಾಗುವ ಹೊತ್ತಿಗೆ 1 ಕೋಟಿ ರೂಪಾಯಿಗಿಂತ ಹೆಚ್ಚಿನ ನಿವೃತ್ತಿ ನಿಧಿಯನ್ನು ಸುಲಭವಾಗಿ ಜೋಡಿಸಲು ಅವಕಾಶವಿದೆ.
Big News: ಕೊರೊನಾ ಕೇಸ್ ಹೆಚ್ಚಳದ ಬೆನ್ನಲ್ಲೇ ʼಮಾಸ್ಕ್ʼ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ
ಪಿಪಿಎಫ್‌ಗಳು 15 ವರ್ಷ ಮೆಚುರಿಟಿ ಅವಧಿ ಹೊಂದಿವೆ. ಇದರ ಮತ್ತೊಂದು ಗಮನಾರ್ಹ ಪ್ರಯೋಜನವೆಂದರೆ ಆರಂಭಿಕ ಅವಧಿ ಮುಗಿದ ನಂತರ ಇದನ್ನು ಐದು ವರ್ಷಗಳ ಬ್ಲಾಕ್ ಅವಧಿಯನ್ನು ಹಲವಾರು ಬಾರಿ ವಿಸ್ತರಿಸಲೂಬಹುದು.
25 ರಿಂದ 30 ವರ್ಷದೊಳಗಿನ ಪಿಪಿಎಫ್ ಖಾತೆಯನ್ನು ತೆರೆದು ಪ್ರತಿ ತಿಂಗಳು 12,500 ರೂ. (ವಾರ್ಷಿಕ 1.5 ಲಕ್ಷ ರೂ.) ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 40.68 ಲಕ್ಷ ರೂ. ಸಂಗ್ರಹಿಸಬಹುದು.
ಎರಡು ಬಾರಿ ಖಾತೆಯನ್ನು 5 ವರ್ಷಗಳವರೆಗೆ ವಿಸ್ತರಿಸಿ ಪ್ರತಿ ವರ್ಷ 1.5 ಲಕ್ಷ ರೂಪಾಯಿಗಳನ್ನು 25 ವರ್ಷಗಳವರೆಗೆ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯಲ್ಲಿ 1,03,08,012 ಕೋಟಿ ರೂಪಾಯಿಗಳನ್ನು ಹೊಂದಬಹುದು.
ಬಡ್ಡಿದರವು ಶೇಕಡಾ 7.1 ರಷ್ಟಿದ್ದರೆ ಪಿಪಿಎಫ್ ಲೆಕ್ಕಾಚಾರದ ಪ್ರಕಾರ 37,50,000 ರೂ. ಠೇವಣಿ ಮತ್ತು ಗಳಿಸಿದ ಬಡ್ಡಿಯು ರೂ. 65,58,012 ಆಗಿರುತ್ತದೆ.