ಸುದೀರ್ಘಾವಧಿ ಹೂಡಿಕೆ ಮೇಲೆ ಕೋಟಿ ರೂಪಾಯಿ ಸಂಪಾದಿಸಲು ಇಚ್ಛಿಸುತ್ತಿದ್ದೀರಾ? ನಿಮ್ಮ ಮಾಸಿಕ ವೇತನದ ಇಪಿಎಫ್ ಉಳಿತಾಯದ ಮೂಲಕ ಈ ಕನಸು ನನಸಾಗಿಸಬಹುದು.
ನಿಮ್ಮ ಸಂಬಳದಿಂದ ಒಂದು ಭಾಗ ಹಾಗೂ ನಿಮ್ಮ ಉದ್ಯೋಗದಾತರಿಂದ ಒಂದು ಭಾಗ ಸೇರಿಸಿ, ಅದಕ್ಕೆ ಬಡ್ಡಿ ದರದಲ್ಲಿ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಾ ಸಾಗುವ ಈ ನಿಧಿ ನಿಮ್ಮ ನಿವೃತ್ತಿ ಬದುಕಿಗೆ ಆಧಾರವಾಗುವಂಥದ್ದು.
2020-21ರ ವಿತ್ತೀಯ ವರ್ಷಕ್ಕೆ ಇಪಿಎಫ್ ನಿಧಿ ಮೇಲೆ 8.5% ಬಡ್ಡಿ ದರ ಕೊಡಲಾಗುತ್ತಿದೆ. ಇದು ಅನೇಕ ಬ್ಯಾಂಕುಗಳಲ್ಲಿ ಇಡುವ ಸ್ಥಿರ ಠೇವಣಿಗಿಂತ ಅಧಿಕವಾಗಿದೆ. ಇದೇ ಬಡ್ಡಿದರದಲ್ಲಿ ಹೂಡಿಕೆ ಮಾಡಿಕೊಂಡು ಹೋದರೆ ವ್ಯಕ್ತಿಯೊಬ್ಬರು 35 ವರ್ಷಗಳ ಬಳಿಕ 1.65 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ಪಡೆಯಲಿದ್ದಾರೆ. ಇಪಿಎಫ್ ಠೇವಣಿ ಮೇಲೆ ಬರುವ ಬಡ್ಡಿಯು ಸಾಮಾನ್ಯವಾಗಿ ತೆರಿಗೆ-ಮುಕ್ತವಾಗಿರುತ್ತದೆ.
ಕದ್ದು ತಿನ್ನಲು ಹೋಗಿ ಕೆಲಸ ಕಳೆದುಕೊಂಡ ಭೂಪ..!
ಈ ಮಟ್ಟದಲ್ಲಿ ಹಣ ಹಿಂಪಡೆಯಲು ನೀವು ನಿಮ್ಮ ಪಿಎಫ್ ಖಾತೆಯಿಂದ ಮಧ್ಯದಲ್ಲೇ ದುಡ್ಡು ಹಿಂದಕ್ಕೆ ಪಡೆಯಬಾರದು. ಯಾವುದೇ ಸಂಸ್ಥೆಯನ್ನು ಸೇರಿದ ಐದು ವರ್ಷಗಳ ಒಳಗೆ ನಿಮ್ಮ ಪಿಎಫ್ ಹಣ ಹಿಂಪಡೆದರೆ ಅದರ ಮೇಲೆ ತೆರಿಗೆ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಹೊಸ ಕಂಪನಿಗೆ ಸೇರಿದ ಮೇಲೆ ನಿಮ್ಮ ಖಾತೆಯಲ್ಲಿರುವ ದುಡ್ಡನ್ನು ಹೊಸ ಖಾತೆಗೆ ವರ್ಗಾಯಿಸಬೇಕು.