ಕೋಟ್ಯಾಧಿಪತಿ ಆಗಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಈ ಕನಸು ನನಸಾಗೋದು ಮಾತ್ರ ಸುಲಭವಲ್ಲ. ಎಷ್ಟೋ ಜನರ ಕನಸು ಕನಸಾಗಿಯೇ ಉಳಿದುಬಿಡುತ್ತದೆ. ಆರಂಭದಿಂದ್ಲೇ ಉಳಿತಾಯ ಮಾಡಿದ್ರೆ ಕೋಟ್ಯಾಧಿಪತಿಯಾಗೋದು ಬಹಳ ಸುಲಭ. ನೀವು ಅದಕ್ಕೆ ತಕ್ಕಂತೆ ಸೇವಿಂಗ್ಸ್ ಪ್ಲಾನ್ ಮಾಡಿಕೊಳ್ಳಬೇಕು.
25 ವರ್ಷದವರಿದ್ದಾಗ ಉಳಿತಾಯ ಶುರು ಮಾಡಿದ್ರೂ 55 ವರ್ಷಕ್ಕೆಲ್ಲಾ ಕೋಟ್ಯಾಧಿಪತಿ ಆಗಬಹುದು. ಅದಕ್ಕಾಗಿ ಪ್ರತಿ ತಿಂಗಳು ಮೂರರಿಂದ ನಾಲ್ಕು ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಬೇಕು. ದಿನಕ್ಕೆ 100-150 ರೂಪಾಯಿಯಂತೆ ಹೂಡಿಕೆ ಮಾಡಿದ್ರೆ 30 ವರ್ಷಗಳಲ್ಲಿ ನೀವು 1 ಕೋಟಿ ಸಂಪಾದಿಸಬಹುದು.
ಇದರಲ್ಲಿ ಶೇ.12 ರಷ್ಟು ಹಣವನ್ನು ಮಾತ್ರ ನೀವು ಉಳಿತಾಯ ಮಾಡಿರುತ್ತೀರಾ. 1 ಕೋಟಿ ರೂಪಾಯಿಯಲ್ಲಿ ಉಳಿದ ಮೊತ್ತ ಬಡ್ಡಿ ಅಥವಾ ರಿಟರ್ನ್ಸ್ ರೂಪದಲ್ಲಿ ಬಂದಿರುತ್ತದೆ. ಆದ್ರೆ 35 ವರ್ಷದವರಿದ್ದಾಗ ನೀವು ಉಳಿತಾಯ ಶುರು ಮಾಡಿದ್ರೆ ಆಗ ಹೆಚ್ಚು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಹಾಗಾಗಿ ಸಣ್ಣ ವಯಸ್ಸಿನಲ್ಲಿಯೇ ಉಳಿತಾಯ ಆರಂಭಿಸುವುದು ಸೂಕ್ತ.