ಸಿಹಿ ಎಂದರೆ ನಿಮಗೆ ಬಹಳ ಇಷ್ಟನಾ…? ಅದನ್ನು ನಿಗ್ರಹಿಸಲು ಸಾಧ್ಯವೇ ಆಗುತ್ತಿಲ್ಲವೇ. ನಿಮ್ಮ ತ್ವಚೆಯ ಮೇಲೆ ಎಣ್ಣೆಯಂಶದ ಪದರ ನಿರ್ಮಾಣವಾಗಲು ಇದೇ ಮುಖ್ಯ ಕಾರಣ ಎಂಬುದು ನಿಮಗೆ ಗೊತ್ತೇ…?
ನಿತ್ಯ ನೀವು ಇಷ್ಟಪಟ್ಟು ತಿನ್ನುವ ಬ್ರೆಡ್, ಕೇಕ್, ಕುಕ್ಕೀಸ್, ಕ್ಯಾಂಡಿ, ಪಾಸ್ತಾ, ಪ್ಯಾನ್ ಕೇಕ್ ಗಳು ಚರ್ಮಕ್ಕೆ ಅಪಾಯಕಾರಿ. ಇವು ತ್ವಚೆಯ ಎಣ್ಣೆಯಂಶವನ್ನು ಹೆಚ್ಚಿಸುತ್ತವೆ. ಇವು ದೇಹದಲ್ಲಿ ಅನಗತ್ಯ ಕೊಬ್ಬನ್ನೂ ಬೆಳೆಸುತ್ತವೆ. ಇವುಗಳ ಬದಲು ಕ್ವಿನೋವಾ, ಪಾಪ್ ಕಾರ್ನ್, ಬ್ರೌನ್ ರೈಸ್ ಸವಿಯಿರಿ.
ಬ್ರೆಡ್ ತಯಾರಿಸುವಾಗ ಧಾನ್ಯಗಳ ಫೈಬರ್ ಮತ್ತು ಪೋಷಕಾಂಶಗಳು ಕಳೆದು ಹೋಗುತ್ತವೆ. ಅವು ರಕ್ತದಲ್ಲಿನ ಸಕ್ಕರೆಯ ಅಂಶದ ಮೇಲೆ ಪರಿಣಾಮ ಬೀರುತ್ತದೆ.
ಮಳೆ ಮತ್ತು ಚಳಿಗಾಲದಲ್ಲಿ ಕೇಕ್, ಚಾಕೊಲೇಟ್, ಬಿಳಿ ಸಕ್ಕರೆ, ಬಿಸ್ಕೆಟ್, ಐಸ್ ಕ್ರೀಮ್ ಹೆಚ್ಚಾಗಿ ತಿನ್ನುವುದನ್ನು ಬಿಟ್ಟು ಬಿಡಿ.
ನಿಮಗೆ ಸಿಹಿಯಾದುದನ್ನು ತಿನ್ನಲೇ ಬೇಕು ಎನಿಸಿದರೆ ಜೇನುತುಪ್ಪ, ತಾಜಾ ಹಣ್ಣುಗಳು, ಅಂಜೂರ, ಬೆಲ್ಲವನ್ನು ಬಳಸಿ, ಸಿಹಿ ಪಾನೀಯ ಮತ್ತು ಸಕ್ಕರೆ ಸಿರಪ್ ಆಧರಿತ ಪಾನೀಯಗಳನ್ನು ಸಂಪೂರ್ಣವಾಗಿ ದೂರವಿರಿಸಿ. ಅವುಗಳ ಬದಲು ತಾಜಾ ಹಣ್ಣಿನ ರಸ, ಎಳನೀರು, ಮಜ್ಜಿಗೆ, ನಿಂಬೆ ಜ್ಯೂಸ್ ಸೇವಿಸಿ.