ಚಾಲನಾ ಪರವಾನಿಗೆ ಹಾಗೂ ಲೈಸೆನ್ಸ್ ರದ್ದಾಗಿದ್ದರೂ ಸಹ ವಾಹನ ಚಾಲನೆ ಮಾಡಿದ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಟಗಾರ ಆರನ್ ವಾನ್-ಬಿಸ್ಸಾಕಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ.
ಮ್ಯಾಂಚೆಸ್ಟರ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾದ ಬಿಸ್ಸಾಕಾ, ಆಲಿಕೆಯ ಸಂದರ್ಭ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಅವರಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣ ಮುಂದಿನ ಆಲಿಕೆಯ ಸಂದರ್ಭದಲ್ಲಿ ಘೋಷಿಸಲಾಗುವುದು.
BIG NEWS: ಲಕ್ಷ ಕೋಟಿ ದಾಟಿದ ಜಿ.ಎಸ್.ಟಿ ಯ ಆಗಸ್ಟ್ ಕಲೆಕ್ಷನ್
ಅತಿಯಾದ ವೇಗದ ಚಾಲನೆಯಿಂದಾಗಿ ಆಟಗಾರನ ಚಾಲನಾ ಪರವಾನಿಗೆ ಕಳೆದ ವರ್ಷ ರದ್ದು ಮಾಡಲಾಗಿತ್ತು. ಆದರೂ ಸಹ ಜೂನ್‌ನಲ್ಲಿ ಲ್ಯಾಂಬೋರ್ಗಿನಿ ಕಾರು ಚಾಲನೆ ಮಾಡುತ್ತಾ ಸಿಕ್ಕಿಕೊಂಡಿರುವ ಬಿಸ್ಸಾಕಾಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.
50 ದಶಲಕ್ಷ ಪೌಂಡ್‌ಗಳ ಭಾರೀ ಬೆಲೆ ತೆತ್ತು ಮ್ಯಾಂಚೆಸ್ಟರ್ ಯುನೈಟೆಡ್ ಈ ಡಿಫೆಂಡರ್‌ನನ್ನು ಖರೀದಿ ಮಾಡಿದ್ದು, ತಂಡದ ಮುಖ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.