ಗದಗ: ಮಳೆಗೆ ಮನೆ ಗೋಡೆ ಕುಸಿದು ಮೂವರು ಮಣ್ಣಿನ ಸಿಲುಕಿದ್ದು, ಮೂವರ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
ಗದಗ ನಗರದ ಕನ್ನಾಳ ಅಗಸಿ ಸಮೀಪ ದುರಂತ ನಡೆದಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಬಂದಿಲ್ಲ. ಎಷ್ಟು ಸಲ ಕರೆ ಮಾಡಿದರೂ ಸ್ಥಳಕ್ಕೆ ಆಂಬುಲೆನ್ಸ್ ಬಾರದ ಕಾರಣ ಆಟೋದಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಣ್ಣಿನಲ್ಲಿ ಸಿಡುಕಿದ್ದ ಮತ್ತೊಬ್ಬರಿಗಾಗಿ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.