ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಚಿತ್ರ-ವಿಚಿತ್ರ ಪದ್ಧತಿಗಳಿಗೆ. ಜನರು ಈಗ್ಲೂ ಅನೇಕ ಪದ್ಧತಿಗಳನ್ನು ಆಚರಿಸಿಕೊಂಡು ಬರ್ತಿದ್ದಾರೆ. ನೆರೆ ದೇಶ ಚೀನಾ ಕೂಡ ಇದ್ರಿಂದ ಹೊರತಾಗಿಲ್ಲ. ಚೀನಾದಲ್ಲಿ ಗರ್ಭಿಣಿ ಪತ್ನಿಯನ್ನು ಪತಿಯರು ಹೊತ್ತು ಅಪಾಯಕಾರಿ ಸ್ಟಂಟ್ ಮಾಡ್ತಾರೆ.
ಚೀನೀ ಸಂಸ್ಕೃತಿಯಲ್ಲಿ ಒಂದು ಪದ್ಧತಿ ಇದೆ. ಧಗಧಗಿಸುವ ಕಲ್ಲಿದ್ದಲನ್ನು ಸುಮಾರು 5-6 ಮೀಟರ್ ಗಳವರೆಗೆ ಹಾಕಲಾಗುತ್ತದೆ. ಪತಿ ಜೊತೆ ಗರ್ಭಿಣಿಯಂದಿರುವ ಅಲ್ಲಿಗೆ ಬರ್ತಾರೆ. ಗರ್ಭಿಣಿ ಪತ್ನಿಯನ್ನು ಎತ್ತಿಕೊಂಡು ಉರಿಯುತ್ತಿರುವ ಕೆಂಡದಲ್ಲಿ ಪತಿ ನಡೆಯಬೇಕು. ಪ್ರತಿ ಪುರುಷರಿಗೂ ಪತ್ನಿ ಎತ್ತಿಕೊಂಡು ಕೆಂಡದ ಮೇಲೆ ನಡೆಯುವಾಗ ಭಯವಿರುತ್ತದೆ. ಆದ್ರೆ ಅನೇಕರು ಈ ಪದ್ಧತಿಯನ್ನು ಪಾಲಿಸುತ್ತಾರೆ. ಹೀಗೆ ಮಾಡಿದಲ್ಲಿ ಹೆರಿಗೆ ವೇಳೆ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ.
ಪತ್ನಿ ಮೇಲೆ ಎಷ್ಟು ಪ್ರೀತಿಯಿದೆ ಎಂಬುದನ್ನು ಪತಿ ಈ ರೀತಿ ತೋರಿಸುತ್ತಾನೆ. ಸದಾ ನಿನ್ನ ಕಷ್ಟದಲ್ಲಿ ನಾನು ಜೊತೆಯಾಗಿರ್ತೇನೆ ಎಂಬುದನ್ನು ಈ ಮೂಲಕ ಹೇಳ್ತಾರಂತೆ. ಈಗ್ಲೂ ಚೀನಾದಲ್ಲಿ ಈ ಪದ್ಧತಿ ಜಾರಿಯಲ್ಲಿದ್ದು, ಅನೇಕರು ಇದನ್ನು ವಿರೋಧಿಸುತ್ತಾರೆ. ಕಾಲು ಜಾರಿದ್ರೆ ಅಪಾಯ ನಿಶ್ಚಿತ.