ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ನಡೆಯುವುದು ಒಂದು ಅತ್ಯುತ್ತಮ ಮಾರ್ಗವಾಗಿದೆ. ಆದರೆ, ವೇಗವಾಗಿ ನಡೆಯುವುದು ಉತ್ತಮವೋ ಅಥವಾ ಹೆಚ್ಚು ಹೊತ್ತು ನಡೆಯುವುದು ಉತ್ತಮವೋ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ತಜ್ಞರ ಪ್ರಕಾರ, ದಿನನಿತ್ಯ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ ಸುಮಾರು 150 ಕ್ಯಾಲರಿಗಳನ್ನು ಸುಡಬಹುದು. ಹಾಗಾಗಿ, ನೀವು ಎಷ್ಟು ವೇಗವಾಗಿ ಮತ್ತು ಎಷ್ಟು ಹೊತ್ತು ನಡೆಯುತ್ತೀರಿ ಎಂಬುದರ ಮೇಲೆ ಕ್ಯಾಲರಿ ದಹನವಾಗುವ ಪ್ರಮಾಣ ಅವಲಂಬಿತವಾಗಿರುತ್ತದೆ.
ವೇಗವಾಗಿ ನಡೆಯುವುದರಿಂದ ಆಗುವ ಪ್ರಯೋಜನಗಳು:
- ತೂಕ ನಷ್ಟ: ವೇಗವಾಗಿ ನಡೆಯುವುದು ಹೃದಯದ ಬಡಿತವನ್ನು ಹೆಚ್ಚಿಸಿ, ಕ್ಯಾಲರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸುಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಹೃದಯ ಆರೋಗ್ಯ: ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ.
- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಊಟದ ನಂತರ ಸ್ವಲ್ಪ ಹೊತ್ತು ವೇಗವಾಗಿ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ವೇಗವಾಗಿ ನಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಜ್ವರ ಮತ್ತು ಶೀತದಂತಹ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.
- ಶಕ್ತಿಯನ್ನು ಹೆಚ್ಚಿಸುತ್ತದೆ: ದಿನನಿತ್ಯ ಸ್ವಲ್ಪ ಹೊತ್ತು ವೇಗವಾಗಿ ನಡೆಯುವುದರಿಂದ ದಿನವಿಡೀ ಶಕ್ತಿಯುತವಾಗಿರುತ್ತೀರಿ.
- ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ: ವೇಗವಾಗಿ ನಡೆಯುವುದರಿಂದ ಸಂಧಿವಾತದಿಂದ ಬಳಲುತ್ತಿರುವವರಿಗೆ ನೋವು ಕಡಿಮೆಯಾಗುತ್ತದೆ.
ನಡೆಯುವಾಗ ಎಚ್ಚರಿಕೆ ವಹಿಸುವುದು ಹೇಗೆ ?
- ಸುರಕ್ಷಿತ ಸ್ಥಳಗಳಲ್ಲಿ ನಡೆಯಿರಿ: ಜನಸಂದಣಿಯಿಲ್ಲದ, ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ನಡೆಯಿರಿ.
- ಪ್ರತಿಫಲಕ ಬಟ್ಟೆ ಧರಿಸಿ: ರಾತ್ರಿ ವೇಳೆ ನಡೆಯುವಾಗ ಪ್ರತಿಫಲಕ ಬಟ್ಟೆ ಧರಿಸುವುದು ಉತ್ತಮ.
- ಕಾಲುಗಳಿಗೆ ಆರಾಮದಾಯಕ ಬೂಟುಗಳನ್ನು ಧರಿಸಿ: ಕಾಲುಗಳಿಗೆ ಆರಾಮದಾಯಕವಾದ ಮತ್ತು ಬೆಂಬಲ ನೀಡುವ ಬೂಟುಗಳನ್ನು ಧರಿಸಿ.
- ನೀರು ಕುಡಿಯಿರಿ: ನಡೆಯುವ ಮೊದಲು ಮತ್ತು ನಂತರ ಸಾಕಷ್ಟು ನೀರು ಕುಡಿಯಿರಿ.
- ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಿ: ಬಿಸಿಲಿನಲ್ಲಿ ನಡೆಯುವಾಗ ಸನ್‌ಸ್ಕ್ರೀನ್ ಬಳಸಿ.
ಈ ವರದಿ ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.