
ರೆಸ್ಟೋರೆಂಟ್‌ನಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದವರಿಗೆ ಪರಿಚಾರಕಿ ಗೂಸಾ ಕೊಟ್ಟಿದ್ದು ನೆಟ್ಟಿಗರು ಆಕೆಯನ್ನ ಲೇಡಿ ಬ್ರೂಸ್ಲಿ ಎಂದು ಹೊಗಳಿದ್ದಾರೆ.
ತನಗೆ ಹಾನಿ ಮಾಡಲು ಪ್ರಯತ್ನಿಸಿದ ಇಬ್ಬರು ಗ್ರಾಹಕರಿಂದ ತಪ್ಪಿಸಿಕೊಳ್ಳಲು ಆಕೆ ಸಮರ ಕಲೆಗಳನ್ನು ಪ್ರದರ್ಶಿಸಿದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇಬ್ಬರು ಪುರುಷರು ಕುಳಿತಿದ್ದ ಮೇಜಿನ ಬಳಿ ಪರಿಚಾರಕಿ ನಿಂತಿರುವುದರೊಂದಿಗೆ 15 ಸೆಕೆಂಡುಗಳ ವಿಡಿಯೋ ಆರಂಭವಾಗುತ್ತದೆ. ಒಂದು ಕ್ಷಣ ಕುಳಿತಿರುವ ಪುರುಷರಲ್ಲಿ ಒಬ್ಬ ಎದ್ದು ನಿಂತು ಪರಿಚಾರಕಿಯ ಕೈಯನ್ನು ಬಲವಂತವಾಗಿ ಹಿಡಿಯುವುದನ್ನ ನೋಡಬಹುದು.
ಮೊದಲು ಆಕೆ ಅವನನ್ನು ತಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಆತ ಅವಳ ಕೈಹಿಡಿದು ವಾಗ್ದಾದಕ್ಕಿಳಿಯುತ್ತಾನೆ. ನಂತರ ಮತ್ತೊಬ್ಬನೂ ಸಹ ಕುರ್ಚಿಯಿಂದ ಎದ್ದು ಆಕೆಯನ್ನ ಎದುರಿಸಲು ಮುಂದಾಗುತ್ತಾನೆ. ಆದರೆ ಆಕೆ ಸಮರ್ಥ ಸಮರ ಕಲೆಗಳ ಮೂಲಕ ಇಬ್ಬರನ್ನ ಎದುರಿಸುತ್ತಾಳೆ. ವಿಡಿಯೋ ನೋಡಿದ ನೆಟ್ಟಿಗರು ಆಕೆಯನ್ನ ಲೇಡಿ ಬ್ರೂಸ್ಲಿ ಎಂದಿದ್ದಾರೆ.
https://twitter.com/cctvidiots/status/1647219127118077953?ref_src=twsrc%5Etfw%7Ctwcamp%5Etweetembed%7Ctwterm%5E1647219127118077953%7Ctwgr%5Ee640fb4b3a238f0f4db5e9b8571199e6d623f4a0%7Ctwcon%5Es1_&ref_url=https%3A%2F%2Ffood.ndtv.com%2Fnews%2Fstaged-or-female-bruce-lee-waitress-fights-two-misbehaving-customers-at-a-restaurant-3954759
https://twitter.com/cctvidiots/status/1647219127118077953?ref_src=twsrc%5Etfw%7Ctwcamp%5Etweetembed%7Ctwterm%5E1647441793800359938%7Ctwgr%5Ee640fb4b3a238f0f4db5e9b8571199e6d623f4a0%7Ctwcon%5Es2_&ref_url=https%3A%2F%2Ffood.ndtv.com%2Fnews%2Fstaged-or-female-bruce-lee-waitress-fights-two-misbehaving-customers-at-a-restaurant-3954759