ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ನಾವೆಲ್ಲ ಲಂಚ್, ಬ್ರಂಚ್ ಅಥವಾ ಡಿನ್ನರ್‌ಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಹೋಗುತ್ತೇವೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಂತಹ ಖುಷಿಯ ಸಂದರ್ಭಗಳಲ್ಲೂ ರೆಸ್ಟೋರೆಂಟ್‌ಗಳಿಗೆ ಹೋಗುವುದು ಕಾಮನ್. ಪ್ರತಿ ರೆಸ್ಟೋರೆಂಟ್‌ನ ಆಹಾರಗಳ ರುಚಿ ಕೂಡ ವಿಭಿನ್ನವಾಗಿರುತ್ತದೆ. ತುಂಬಾನೇ ಫೇಮಸ್ ಹೋಟೆಲ್ ಅಥವಾ ರೆಸ್ಟೋರೆಂಟ್ ಆಗಿದ್ದರೆ ಮುಂಚಿತವಾಗಿ ಟೇಬಲ್ ಬುಕ್ ಮಾಡಬೇಕಾಗುತ್ತದೆ.
ಇಲ್ಲದಿದ್ದರೆ ಸ್ವಲ್ಪ ಹೊತ್ತು ಕಾಯಬೇಕಾಗುತ್ತದೆ. ಹೆಚ್ಚೆಂದರೆ ಅರ್ಧಗಂಟೆಯಿಂದ ಒಂದು ಗಂಟೆ ಕಾಯಬೇಕಾಗಬಹುದು. ಆದರೆ ಇಲ್ಲೊಂದು ರೆಸ್ಟೋರೆಂಟ್ ಇದೆ. ಇಲ್ಲಿ ಊಟ ಮಾಡಬೇಕೆಂದು ನೀವು ಬಯಸಿದ್ರೆ ನಾಲ್ಕು ವರ್ಷ ಕಾಯಬೇಕು. ಈ ರೆಸ್ಟೋರೆಂಟ್ ಇರೋದು ಬ್ರಿಟನ್‌ನಲ್ಲಿ. ಇಲ್ಲಿ ಟೇಬಲ್ ಸಿಗುವದು ಸುಲಭವಲ್ಲ. ಸೆಂಟ್ರಲ್ ಬ್ರಿಸ್ಟಲ್‌ನಲ್ಲಿರುವ ಬ್ಯಾಂಕ್ ಟಾವೆರ್ನ್ ರೆಸ್ಟೋರೆಂಟ್‌ನಲ್ಲಿ 4 ವರ್ಷ ಮೊದಲೇ ಟೇಬಲ್ ಬುಕ್ಕಿಂಗ್ ಮಾಡಬೇಕು.
ಈ ರೆಸ್ಟೊರೆಂಟ್ ಪ್ರಪಂಚದಲ್ಲೇ ಅತಿ ಹೆಚ್ಚು ವೇಯ್ಟಿಂಗ್ ಸಮಯವನ್ನು ಹೊಂದಿದೆ. ಈ ರೆಸ್ಟೋರೆಂಟ್‌ನಲ್ಲಿ ವಿಶೇಷವಾಗಿ ಭಾನುವಾರದ ಊಟ ಮಾಡಬೇಕೆಂದರೆ ನಾಲ್ಕು ವರ್ಷಗಳ ಕಾಲ ಕಾಯಬೇಕಾಗಿದೆ. ಇಲ್ಲಿನ ಮೆನು ಕೂಡ ವಿಭಿನ್ನವಾಗಿದೆ. ಗ್ರಾಹಕರು ಮೂರು-ಕೋರ್ಸ್ ಊಟಕ್ಕೆ ಸುಮಾರು 2,850 ರೂಪಾಯಿ ವೆಚ್ಚ ಮಾಡಬೇಕು. ಎರಡು-ಕೋರ್ಸ್ ಊಟಕ್ಕೆ 2,320 ರೂಪಾಯಿ ಪಾವತಿಸಬೇಕಾಗುತ್ತದೆ.
ಭಾನುವಾರ ರಾತ್ರಿಯ ಊಟಕ್ಕಾಗಿ ರೆಸ್ಟೋರೆಂಟ್‌ನಲ್ಲಿ ಬುಕಿಂಗ್ ಅನ್ನು ಪ್ರಸ್ತುತ ಮುಚ್ಚಲಾಗಿದೆ. ಸ್ವಲ್ಪ ಸಮಯದವರೆಗೆ ರಾತ್ರಿಯ ಭೋಜನಕ್ಕೆ ಬುಕಿಂಗ್ ಲಭ್ಯವಿಲ್ಲ. ನಾಲ್ಕು ವರ್ಷ ಮೊದಲೇ ಬುಕ್ ಮಾಡುವ ಬದಲು ಗ್ರಾಹಕರು ನೇರವಾಗಿ ರೆಸ್ಟೋರೆಂಟ್‌ಗೆ ಹೋಗಿ ಅದೃಷ್ಟ ಪರೀಕ್ಷಿಸಬಹುದು. ಟೇಬಲ್ ಸಿಕ್ಕರೆ ಭಾನುವಾರ ಈ ಅಪರೂಪದ ರೆಸ್ಟೋರೆಂಟ್‌ನಲ್ಲಿ ತಿನಿಸುಗಳನ್ನು ಸವಿಯಬಹುದು.