ಸರಿಯಾಗಿ ಕೆಲಸ ಮಾಡಿದರೇನೇ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ಸರಿಯಾದ ಸಂಬಳ ನೀಡುವುದಿಲ್ಲ. ಅಂಥದ್ದರಲ್ಲಿ ಆರು ತಿಂಗಳು ಕೆಲಸ ಮಾಡದೇ ಇದ್ದರೂ ಒಂದೂವರೆ ಕೋಟಿ ರೂಪಾಯಿಗಳನ್ನು ಕಂಪೆನಿಯೊಂದು ನೀಡಿತು ಎಂದರೆ ಅದನ್ನು ಏಪ್ರಿಲ್ ಫೂಲ್ ಎಂದು ಭಾವಿಸಬೇಡಿ.
ಉದ್ಯೋಗ ಕಡಿತ ಹೆಚ್ಚುತ್ತಿರುವ ಈ ದಿನಗಳಲ್ಲಿ ಕೆಲವೊಂದು ಕಂಪೆನಿ ತಮ್ಮ ಉದ್ಯೋಗಿಗಳನ್ನು ವಜಾಮಾಡಿ ಆರು ತಿಂಗಳು ಅಥವಾ ವರ್ಷದ ಸಂಬಳವನ್ನು ನೀಡುತ್ತದೆ. ಅದೇ ರೀತಿ ಮೆಟಾ ಕಂಪೆನಿ ಉದ್ಯೋಗಿಯೊಬ್ಬರಿಗೂ ಆಗಿದ್ದು, ಅದೀಗ ವೈರಲ್ ಆಗಿದೆ.
ಮೆಟಾ ಕಂಪೆನಿಯೊಂದ ವಜಾಗೊಂಡ ಮೆಡೆಲಿನ್ ಮಚಾಡೊ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಕಾರಣ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಮೆಟಾ ಕಂಪೆನಿಯು ನನಗೆ ಆರು ತಿಂಗಳ ಸಂಬಳ 190,000 ಡಾಲರ್ (ಸುಮಾರು ರೂ. 1.5 ಕೋಟಿ) ನೀಡಿದೆ. ನಾನು ತುಂಬಾ ಅದೃಷ್ಟವಂತೆ ಎಂದಿದ್ದಾರೆ. ಕಂಪೆನಿಯು ಅಪಾರ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಿರುವ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ಈ ರೀತಿಯಾಗಿ ಉದ್ಯೋಗಿಗಳಿಗೆ ಬೃಹತ್ ಮೊತ್ತವನ್ನು ಪಾವತಿ ಮಾಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.