ದಕ್ಷಿಣ ಏಷ್ಯಾದ ಅತಿ ದೊಡ್ಡ ಆತಿಥ್ಯ ಸಮೂಹವಾದ ಇಂಡಿಯಾ ಹೊಟೇಲ್ಸ್ ನಿಯಮಿತ (ಐಎಚ್‌ಸಿಎಲ್) ತನ್ನ ಪ್ರಖ್ಯಾತ ʼತಾಜ್ʼ ಜಗತ್ತಿನ ಅತ್ಯಂತ ಬಲಿಷ್ಠ ಹೊಟೇಲ್ ಬ್ರಾಂಡ್ ಆಗಿದೆ ಎಂದು ಘೋಷಿಸಿದೆ.
ಜಗತ್ತಿನ ಮುಂಚೂಣಿ ಬ್ರಾಂಡ್ ಮೌಲ್ಯಮಾಪಕ ಸಂಸ್ಥೆ ’ಬ್ರಾಂಡ್ ಫೈನಾನ್ಸ್’ ಈ ಸಂಬಂಧ ನಡೆಸಿದ ’ಹೊಟೇಲ್ಸ್ 50, 2021’ ಅಧ್ಯಯನ ವರದಿಯಲ್ಲಿ ಈ ಸ್ಥಾನವನ್ನು ತಾಜ್‌ಗೆ ಕೊಟ್ಟಿದೆ. ಜಗತ್ತಿನಾದ್ಯಂತ ಇರುವ ಅತ್ಯಂತ ಮೌಲ್ಯೀಕೃತ ಹಾಗೂ ಬಲಿಷ್ಠ ಹೊಟೇಲ್ ಬ್ರಾಂಡ್‌ಗಳ ಬಗ್ಗೆ ಅಧ್ಯಯನ ನಡೆಸಿದ ಈ ಸಂಸ್ಥೆಯು ತಾಜ್‌ಗೆ ಒಟ್ಟಾರೆ ಬ್ರಾಂಡ್ ಶಕ್ತಿ ಸೂಚ್ಯಂಕದಲ್ಲಿ 100ಕ್ಕೆ 89.3 ಅಂಕಗಳನ್ನು ಕೊಟ್ಟಿದೆ.
ಪಾಟ್ನಾದಲ್ಲಿ ಸುರಿದ ಭಾರೀ ಮಳೆಗೆ ವಿಧಾನಸಭಾ ಕಟ್ಟಡದ ಆವರಣ ಸಂಪೂರ್ಣ ಜಲಾವೃತ
ವಿಶ್ವ ದರ್ಜೆ ಗ್ರಾಹಕ ಸೇವೆ ಕೊಡುವುದರೊಂದಿಗೆ ಗ್ರಾಹಕ ಸಂತುಷ್ಟಿ, ನೌಕರರ ಸಂತುಷ್ಟಿ ಹಾಗೂ ಕಾರ್ಪೋರೇಟ್ ಪ್ರತಿಷ್ಠೆಗಳನ್ನು ಗಣನೆಗೆ ತೆಗೆದುಕೊಂಡಾದ ತಾಜ್ ಬ್ರಾಂಡ್‌ಗೆ ಎಎಎ ರೇಟಿಂಗ್ ಸಿಕ್ಕಿದೆ.