
ಅಹಮದಾಬಾದ್ : ವಾಘ್ ಬಕ್ರಿ ಬ್ರಾಂಡ್ ಗೆ ಹೆಸರುವಾಸಿಯಾದ ಗುಜರಾತ್ ಟೀ ಪ್ರೊಸೆಸರ್ಸ್ ಮತ್ತು ಪ್ಯಾಕರ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ (49) ನಿಧನರಾಗಿದ್ದಾರೆ.
ವರದಿಯ ಪ್ರಕಾರ, ದೇಸಾಯಿ ಅವರು ತಮ್ಮ ಮನೆಯ ಹೊರಗಡೆ ಇದ್ದ ವೇಳೆ ಬೀದಿ ನಾಯಿಗಳು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಅವರನ್ನು ಅಕ್ಟೋಬರ್ 15 ರಂದು ಶೆಲ್ಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಬೀಳುವಾಗ ಅವರ ತಲೆಗೆ ತೀವ್ರವಾದ ಗಾಯಗಳಾಗಿದ್ದು, ಇದು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಯಿತು. ಕೂಡಲೇ ಸೆಕ್ಯುರಿಟಿ ಗಾರ್ಡ್ ಘಟನೆಯ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು, ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಶೆಲ್ಬಿ ಆಸ್ಪತ್ರೆಯಲ್ಲಿ ಒಂದು ದಿನದ ವೀಕ್ಷಣೆಯ ನಂತರ, ದೇಸಾಯಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಜೈಡಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ , ಮೆದುಳಿನ ರಕ್ತಸ್ರಾವದಿಂದಾಗಿ ಅವರು ಭಾನುವಾರ ನಿಧನರಾದರು.