ಬೆಂಗಳೂರು: ಸೆಪ್ಟೆಂಬರ್ 4ರಿಂದ ಇಂಜಿನಿಯರಿಂಗ್ ಕಾಲೇಜುಗಳ ಮೊದಲ ಸೆಮಿಸ್ಟರ್ ತರಗತಿಗಳು ಆರಂಭವಾಗಲಿವೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU) 2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟಂಬರ್ 4ರಿಂದ ಮೊದಲ ಸೆಮಿಸ್ಟರ್ ಇಂಜಿನಿಯರಿಂಗ್ ತರಗತಿಗಳು ಶುರುವಾಗಲಿದ್ದು, ಮೊದಲ 10 ದಿನ ವಿದ್ಯಾರ್ಥಿಗಳಿಗೆ ಪುನಶ್ಚೇತನ ತರಗತಿ ನಡೆಸಲಾಗುವುದು. ಸೆಪ್ಟೆಂಬರ್ 15 ರಿಂದ ಅಧಿಕೃತವಾಗಿ ಮೊದಲ ಸೆಮಿಸ್ಟರ್ ಪಾಠಗಳು ಶುರುವಾಗಲಿವೆ.
2024ರ ಜನವರಿ 6ರೊಳಗೆ ಬೋಧನಾ ಕಾರ್ಯ ಪೂರ್ಣಗೊಳಿಸಿ, ಜನವರಿ 8 ರಿಂದ 19 ರವರೆಗೆ ಪ್ರಾಯೋಗಿಕ ಪರೀಕ್ಷೆ, ಜನವರಿ 22 ರಿಂದ ಫೆಬ್ರವರಿ 17ರವರೆಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಫೆಬ್ರವರಿ 19 ರಿಂದ ಎರಡನೇ ಸೆಮಿಸ್ಟರ್ ತರಗತಿಗಳು ಆರಂಭವಾಗಲಿವೆ ಎಂದು ಹೇಳಲಾಗಿದೆ.