
ಹರಾಜು ಪ್ರಕ್ರಿಯೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ವೃಂದಾ ದಿನೇಶ್, ಎರಡನೇ ಆವೃತ್ತಿಯ ಡಬ್ಲ್ಯೂ ಪಿ ಎಲ್ ನಲ್ಲಿ ಆಯ್ಕೆಯಾಗಿದ್ದಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಹಣದಿಂದ ತಮ್ಮ ಹೆತ್ತವರಿಗೆ ಹೊಸ ಕಾರು ಕೊಡಿಸುವುದಾಗಿ ತಿಳಿಸಿದ ಅವರು, ತಾವು ಆಯ್ಕೆಯಾಗಿರುವ ಕುರಿತು ಅಮ್ಮನಿಗೆ ತಿಳಿಸಲು ವಿಡಿಯೋ ಕರೆ ಮಾಡಬೇಕೆಂದುಕೊಂಡಿದ್ದೆ. ಆದರೆ ಅವರ ಕಣ್ಣಲ್ಲಿ ನೀರಿರುತ್ತದೆ ಎಂಬ ಕಾರಣಕ್ಕೆ ಆಡಿಯೋ ಕಾಲ್ ಮಾಡಿ ಮಾತನಾಡಿದೆ ಎಂದು ಹೇಳಿದ್ದಾರೆ.