ಬೆಂಗಳೂರು: ವೋಟರ್ ಐಡಿ ಹಗರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ಮುಂದುವರೆದಿದೆ, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಗರಣ ತಿರುಗಿಸಿದೆ.
ಚಿಲುಮೆ ಸಂಸ್ಥೆಗೆ ಅನುಮತಿ ನೀಡಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 2017ರಲ್ಲಿ ಚಿಲುಮೆ ಸಂಸ್ಥೆಗೆ ಕಾಂಗ್ರೆಸ್ ಅನುಮತಿ ನೀಡಿದೆ. ಸ್ಪೋಟಕ ದಾಖಲೆಗಳ ಜೊತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು ನೀಡಿದೆ. 2017ರ ಸೆಪ್ಟೆಂಬರ್ 27 ರಂದು ಬಿಬಿಎಂಪಿ ಅನುಮತಿ ನೀಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತ್ಯಸ್ತ್ರ ಪ್ರಯೋಗಿಸಿದೆ.