ತನ್ನ ಮೊದಲ ಇವಿ XC40 ರೀಚಾರ್ಜ್ ಅನ್ನು ವೋಲ್ವೋ ಕಾರ್ ಇಂಡಿಯಾ ಕಳೆದ ಜುಲೈನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಈ ಕಾರುಗಳ ಡೆಲಿವರಿ ನವೆಂಬರ್ 2022 ರಿಂದ ಆರಂಭಗೊಂಡಿದ್ದು, ಆರು ತಿಂಗಳ ಒಳಗೆ ಕಂಪನಿಯು 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳ ಡೆಲಿವರಿ ಮಾಡಿದೆ.
ಭಾರತದಲ್ಲಿ ಸ್ಥಳೀಯವಾಗಿ ಜೋಡಣೆಯಾಗಲ್ಪಡುವ ವೋಲ್ವೋ XC40 ಯ ಬೆಲೆಯು ಸದ್ಯಕ್ಕೆ 56.90 ಲಕ್ಷ (ಎಕ್ಸ್‌ಶೋ ರೂಂ) ಆಗಿದೆ.
78 ಕಿವ್ಯಾ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವ ವೋಲ್ವೋ XC40, ಪ್ರತಿ ಚಾರ್ಜ್‌ಗೆ 418 ಕಿಮೀ ದೂರ ಕ್ರಮಿಸುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳಿದ್ದು, ಒಟ್ಟಾರೆ 402 ಬಿಎಚ್‌ಪಿ ಹಾಗೂ 600 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪತ್ತಿ ಮಾಡುತ್ತದೆ. 150 ಕಿವ್ಯಾ ಡಿಸಿ ವೇಗದ ಚಾರ್ಜ್‌ನ ಸಹಾಯದೊಂದಿಗೆ ಕೇವಲ 40 ನಿಮಿಷಗಳ ಒಳಗೆ ಈ ಕಾರನ್ನು 0-80%ವರೆಗೆ ಚಾರ್ಜ್ ಮಾಡಬಹುದಾಗಿದೆ.
ಆಂಡ್ರಾಯ್ಡ್ ಆಧರಿತ ಇನ್ಫೋಟೇನ್ಮೆಂಟ್ ವ್ಯವಸ್ಥೆ, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಲೆವೆಲ್-2 ಅಡಾಸ್ ಸೇರಿದಂತೆ ಅನೇಕ ಅತ್ಯಾಧುನಿಕ ಫೀಚರ್‌ಗಳನ್ನು XC40 ಒಳಗೊಂಡಿದೆ. ಮಿನಿ ಕೂಪರ್ ಎಸ್‌ಇ, ಕಿಯಾ ಇವಿ6, ಆಡಿ ಇ-ಟ್ರಾನ್, ಬಿಎಂಡಬ್ಲ್ಯೂ ಐ4ಗಳಿಗೆ ಸರಿಸಮನಾದ ಮಾಡೆಲ್ ಆಗಿದೆ XC40.