ಫೋಕ್ಸ್ ವ್ಯಾಗನ್ ಕಾರು ಖರೀದಿಸಲು ಪ್ಲಾನ್ ನಲ್ಲಿದ್ದರೆ ವರ್ಷಾಂತ್ಯದೊಳಗೆ ಕಾರ್ ಖರೀದಿ ಮಾಡಿ. ಯಾಕೆಂದ್ರೆ ಹೊಸ ವರ್ಷದಲ್ಲಿ ಬೆಲೆ ಏರಿಕೆ ಮಾಡಲಿರುವ ಕಂಪನಿಗಳ ಪಟ್ಟಿಗೆ ಫೋಕ್ಸ್ ವ್ಯಾಗನ್ ಕೂಡ ಸೇರಿಕೊಂಡಿದೆ. ಜನವರಿ 1 ರಿಂದ ಭಾರತದಲ್ಲಿ ಪೊಲೊ, ವೆಂಟೊ ಮತ್ತು ಟಿಗುನ್ ಮಧ್ಯಮ ಗಾತ್ರದ ಎಸ್‌ಯುವಿಗಳ ಬೆಲೆ ಹೆಚ್ಚಾಗಲಿದೆ.
ಎಲ್ಲಾ ಕಂಪನಿಗಳಂತೆ, ಫೋಕ್ಸ್ ವ್ಯಾಗನ್ ಇಂಡಿಯಾ ಕೂಡ ಈ ಮೂರು ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ. ವೆಚ್ಚ ಹೆಚ್ಚಾಗಿರುವ ಕಾರಣ ಕಾರಿನ ಬೆಲೆ ಏರಿಕೆ ಮಾಡ್ತಿರುವುದಾಗಿ ಕಂಪನಿ ಹೇಳಿದೆ. ಹೊಸ ವರ್ಷ ಶುರುವಾಗ್ತಿದ್ದಂತೆ ಬಹುತೇಕ ಕಂಪನಿಗಳು ಬೆಲೆ ಏರಿಕೆಗೆ ಮುಂದಾಗಿವೆ.
ಮೂರು ಕಾರುಗಳ ಬೆಲೆ ಶೇಕಡಾ 2 ರಿಂದ 5 ರಷ್ಟು ಹೆಚ್ಚಾಗಲಿದೆ ಎಂದು ಕಂಪನಿ ಹೇಳಿದೆ. ಕಾರಿನ ಮಾದರಿ ಮೇಲೆ ಬೆಲೆ ಏರಿಕೆಯಾಗಲಿದೆ. ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವಾಗಿದ್ದು, ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.
ಫೋಕ್ಸ್ ವ್ಯಾಗನ್ ಮಾತ್ರವಲ್ಲ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಆಡಿ, ಮರ್ಸಿಡಿಸ್ ಕಂಪನಿಗಳು ಕಾರಿನ ಬೆಲೆ ಏರಿಸಲು ಮುಂದಾಗಿವೆ. ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ.