
ವೋಕ್ಸ್ ವ್ಯಾಗನ್ ಗ್ರೂಪ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿಶ್ವಾದ್ಯಂತ ಮಾರಾಟವಾದ 1 ಲಕ್ಷಕ್ಕೂ ಹೆಚ್ಚು ಪ್ಲಗ್-ಇನ್ ಹೈಬ್ರಿಡ್ ಕಾರುಗಳನ್ನು ಹಿಂಪಡೆದಿದೆ. ಈ ಎಲ್ಲಾ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಪಾಯವಿದೆ ಎಂಬ ಕಾರಣಕ್ಕೆ ವೋಕ್ಸ್ ವ್ಯಾಗನ್ ಈ ನಿರ್ಧಾರಕ್ಕೆ ಬಂದಿದೆ.
ವೋಕ್ಸ್ ವ್ಯಾಗನ್ ಪ್ಯಾಸ್ಸಾಟ್, ಗಾಲ್ಫ್, ಟಿಗುನ್ ಮತ್ತು ಆರ್ಟಿಯಾನ್‌ನ ಸುಮಾರು 42,300 ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೊತೆಗೆ ವೋಕ್ಸ್ ವ್ಯಾಗನ್ ನ ಅಂಗಸಂಸ್ಥೆ ಬ್ರಾಂಡ್ ಆಡಿಯ ಸುಮಾರು 24,400 ಕಾರುಗಳನ್ನು ಹಿಂಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ. ಸ್ಕೋಡಾ ವಾಹನಗಳನ್ನು ಕೂಡ ವಾಪಸ್ ಪಡೆಯುವ ಸಾಧ್ಯತೆಯಿದೆ.
ಉಕ್ರೇನ್ ಯುದ್ಧದ ನಡುವೆ ಭಾರತಕ್ಕೆ ರಷ್ಯಾದಿಂದ ಬಂಪರ್ ಆಫರ್: ಅತಿ ಕಡಿಮೆ ಬೆಲೆಗೆ ಕಚ್ಚಾತೈಲ ಪೂರೈಕೆ
ವೋಕ್ಸ್ ವ್ಯಾಗನ್ ಪ್ರಕಾರ, ಕಾರಿನ ತಂತ್ರಜ್ಞಾನದಲ್ಲಿ ದೋಷ ಕಂಡು ಬಂದಿದೆ. ಇದ್ರಿಂದ ಶಾರ್ಟ್ ಸರ್ಕ್ಯೂಟ್ ಅಥವಾ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಒಂದು ಲಕ್ಷ ವಾಹನಗಳನ್ನು ಹಿಂತೆಗೆದುಕೊಳ್ಳುವುದಾಗಿ ಕಂಪನಿ ಹೇಳಿದೆ.
ಇಂಧನ ಚಾಲಿತ ಎಂಜಿನ್ ಮತ್ತು ಎಲೆಕ್ಟ್ರಿಕ್ ಡ್ರೈವ್ ಅನ್ನು ಸಂಪರ್ಕಿಸುವ ತಂತ್ರಜ್ಞಾನದಲ್ಲಿ ಕೆಲವು ಸಮಸ್ಯೆಗಳಿವೆ. ಈ ಕಾರಣದಿಂದಾಗಿ, ಇನ್ಸುಲೇಟೆಡ್ ಹೈ ವೋಲ್ಟೇಜ್ ಬ್ಯಾಟರಿ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಬಹುದು ಎಂದು ವಕ್ತಾರರು ಹೇಳಿದ್ದಾರೆ. ಜರ್ಮನಿಯಲ್ಲಿ ಈಗಾಗಲೇ 16 ಪ್ರಕರಣಗಳು ವರದಿಯಾಗಿವೆ ಎಂದು ಕಂಪನಿ ಹೇಳಿದೆ.