ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ನಂತಹ ಒಟಿಟಿ ಪ್ಲಾಟ್ಫಾರ್ಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಪಡೆಯಲು ಗ್ರಾಹಕರು ಚಂದಾದಾರಿಕೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಗ್ರಾಹಕರ ಬೇಡಿಕೆ ಗಮನದಲ್ಲಿಟ್ಟುಕೊಂಡು ಖಾಸಗಿ ಟೆಲಿಕಾಂ ಕಂಪನಿ ವಿಐ ಕೆಲ ಯೋಜನೆಗಳನ್ನು ನೀಡ್ತಿದೆ. ಇದ್ರಲ್ಲಿ ಈ ಮೂರರ ಚಂದಾದಾರಿಕೆ ಉಚಿತವಾಗಿ ಸಿಗಲಿದೆ.
ವಿಐನ 1099 ರೂಪಾಯಿ ಯೋಜನೆ ಪ್ರಮುಖ ಪೋಸ್ಟ್ ಪೇಯ್ಡ್ ಯೋಜನೆಯಲ್ಲಿ ಒಂದಾಗಿದೆ. ಅನಿಯಮಿತ ಇಂಟರ್ನೆಟ್ ಇದರಲ್ಲಿ ಲಭ್ಯವಿದೆ. ತಿಂಗಳಿಗೆ 100 ಎಸ್ಎಂಎಸ್ ಜೊತೆ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಹಾಗೂ ವಿಐ ಮೂವಿ ಟಿವಿ ಗೆ ಒಂದು ವರ್ಷದ ಚಂದಾದಾರಿಕೆಯನ್ನು ಸಹ ಪಡೆಯಬಹುದು.
ಕಂಪನಿಯ 1699 ರೂಪಾಯಿ ಯೋಜನೆಯಲ್ಲಿ ಗ್ರಾಹಕರು ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್ ಕರೆಗಳು, ಅನಿಯಮಿತ ಡೇಟಾ ಮತ್ತು ದಿನಕ್ಕೆ 100 ಎಸ್ಎಂಎಸ್ ಸೌಲಭ್ಯ ಪಡೆಯುತ್ತಾರೆ. ಜೊತೆಗೆ ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆ ಪಡೆಯುತ್ತಾರೆ.
ಇನ್ನು ಕಂಪನಿಯ 2299 ರೂಪಾಯಿ ಯೋಜನೆ ಮೂರು ಯೋಜನೆಗಳಲ್ಲಿ ಅತ್ಯಂತ ದುಬಾರಿಯಾಗಿದೆ. ಇದರಲ್ಲಿ, ಬಳಕೆದಾರರಿಗೆ 3 ಸಾವಿರ ಎಸ್ಎಂಎಸ್, ಅನಿಯಮಿತ ಇಂಟರ್ನೆಟ್ ಮತ್ತು ಅನಿಯಮಿತ ಸ್ಥಳೀಯ, ಎಸ್ ಟಿ ಡಿ ಮತ್ತು ರಾಷ್ಟ್ರೀಯ ರೋಮಿಂಗ್ ಕರೆ ಸಿಗಲಿದೆ. ಇಲ್ಲಿಯೂ ಮೂರು ಕಂಪನಿಯ ಚಂದಾದಾರಿಕೆ ಸಿಗಲಿದೆ. ಇದಲ್ಲದೆ ಇನ್ನೂ ಅನೇಕ ಸೌಲಭ್ಯಗಳನ್ನು ಈ ಯೋಜನೆಯಲ್ಲಿ ಗ್ರಾಹಕರು ಪಡೆಯಬಹುದಾಗಿದೆ.