ಟೆಲಿಕಾಂ ಮಾರುಕಟ್ಟೆಗೆ ಜಿಯೋ ಪ್ರವೇಶ ಮಾಡ್ತಿದ್ದಂತೆ ಬೆಲೆ ಯುದ್ಧ ಶುರುವಾಗಿತ್ತು. ವೋಡಾಫೋನ್ ಐಡಿಯಾ, ಬಿಎಸ್ಎನ್ಎಲ್ ಸೇರಿದಂತೆ ಅನೇಕ ಟೆಲಿಕಾಂ ಕಂಪನಿಗಳು ಇದ್ರಿಂದ ನಷ್ಟ ಅನುಭವಿಸಿವೆ.
ಭಾರತದಲ್ಲಿ ಜಿಯೋ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಯೋ ಚಂದಾದಾರಿಕೆ ಪಡೆಯುವ ಗ್ರಾಹಕರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಾರಿ ಕೂಡ ಜಿಯೋ ಮೊದಲ ಸ್ಥಾನ ಉಳಿಸಿಕೊಂಡಿದೆ. ಟ್ರಾಯ್ ಪ್ರಕಾರ, ಆಗಸ್ಟ್ ನಲ್ಲಿ 0.649 ಮಿಲಿಯನ್ ವೈರ್ ಲೆಸ್ ಚಂದಾದಾರರು ಜಿಯೋ ಸೇರಿದ್ದಾರೆ. ಏರ್ಟೆಲ್ ಗೆ 0.138 ಮಿಲಿಯನ್ ಚಂದಾದಾರರು ಸೇರಿದ್ದಾರೆ.
ಟ್ರಾಯ್, ಆಗಸ್ಟ್ ನ ಟೆಲಿಕಾಂ ಚಂದಾದಾರಿಕೆ ವರದಿಯನ್ನು ಬಿಡುಗಡೆ ಮಾಡಿದೆ. ಜುಲೈನಲ್ಲಿ ಶೇಕಡಾ 37.34ರಷ್ಟು ಚಂದಾದಾರರನ್ನು ಹೊಂದಿದ್ದ ಜಿಯೋ ಆಗಸ್ಟ್ ನಲ್ಲಿ ಶೇಕಡಾ 37.40ರಷ್ಟು ಚಂದಾದಾರರನ್ನು ಹೊಂದಿದೆ. ಏರ್ಟೆಲ್ ಜುಲೈನಲ್ಲಿ ಶೇಕಡಾ 29.83 ಚಂದಾದಾರರನ್ನು ಹೊಂದಿದ್ದ ಏರ್ಟೆಲ್ ಆಗಸ್ಟ್ ನಲ್ಲಿ ಶೇಕಡಾ 29.83 ಚಂದಾದಾರರನ್ನು ಹೊಂದಿದೆ.
ವೋಡಾಫೋನ್ ಗೆ ಆಗಸ್ಟ್ ನಲ್ಲಿ ಹಿನ್ನಡೆಯಾಗಿದೆ. ಜುಲೈಗಿಂತ ಆಗಸ್ಟ್ ನಲ್ಲಿ ಚಂದಾದಾರರ ಸಂಖ್ಯೆ ಕಡಿಮೆಯಾಗಿದೆ. ಬಿಎಸ್ಎನ್ಎಲ್ ಚಂದಾದಾರರ ಸಂಖ್ಯೆ ಕೂಡ ಕಡಿಮೆಯಾಗಿದೆ.