
ಸ್ಟಾರ್ಸ್ ಗಳಿಗೆನೇ ಟಕ್ಕರ್ ಕೊಡುವಂತಹ ಪ್ರಾಡೆಕ್ಟ್‌ಗಳಿಗೆ ಅಂಬಾಸಿಡರ್ ಆಗಿದ್ದವರು ಕೊಹ್ಲಿ. ಈಗ ಇದೇ ವಿರಾಟ್ ಕೊಹ್ಲಿ ಇದ್ದ ಜಾಹೀರಾತನ್ನ ಪ್ರಸಾರ ಮಾಡದಿರಲು ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿವೋ ನಿರ್ಧರಿಸಿದೆ.
2021 ರ ಏಪ್ರಿಲ್ ತಿಂಗಳಲ್ಲಿ ವಿವೋ ಕಂಪನಿ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ, ಭಾರತೀಯ ಕ್ರಿಕೆಟ್ ಆಟಗಾರ ಕೊಹ್ಲಿಯನ್ನ ಆಯ್ಕೆ ಮಾಡಿಕೊಂಡಿತ್ತು. ಆ ಬಳಿಕ ಕೊಹ್ಲಿ, ವಿವೋ ಸಂಸ್ಥೆಯ ಪ್ರಾಡೆಕ್ಟ್‌ಗಳ ಪ್ರಚಾರ, ಈವೆಂಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಂಪನಿ ಪ್ರಾಡೆಕ್ಟ್‌ಗಳನ್ನ ವಿವರಿಸುವಂತಹ ಜಾಹೀರಾತುಗಳಲ್ಲಿ ಕಾಣಿಸತೊಡಗಿದ್ದರು.
ಈ ನಡುವೆ ಜಾರಿ ನಿರ್ದೇಶನಾಲಯ ಚೀನಾ ಮೂಲದ ಕಂಪನಿಯಾಗಿರುವ ವಿವೋ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿತ್ತು.
ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಇದರ ಸಹಭಾಗಿಯಾಗಿರುವ 23 ವಿವಿಧ ಕಂಪನಿಗಳ ಮೇಲೆ ಇಡಿ ಕೆಲ ದಿನಗಳ ಹಿಂದೆ ದಾಳಿ ಸಹ ಮಾಡಿತ್ತು. ಇದಾದ ಬಳಿಕ ಕಂಪನಿಯ ವಿರುದ್ಧ ತನಿಖೆ ಪೂರ್ಣಗೊಳ್ಳುವವರೆಗೂ ಕೊಹ್ಲಿ ಇರುವ ಜಾಹೀರಾತನ್ನು ಪ್ರಸಾರ ಮಾಡದಿರಲು ವಿವೋ ಕಂಪನಿ ತೀರ್ಮಾನಿಸಿದೆ.
ಕೆಲ ಮೂಲಗಳ ಪ್ರಕಾರ ಇಡಿ ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ಕೊಹ್ಲಿ ಇರುವ ಯಾವುದೇ ಜಾಹೀರಾತು ಮತ್ತು ಪ್ರಚಾರ ಕಾರ್ಯ ಮಾಡದಿರಲು ಕಂಪನಿ ನಿರ್ಧಾರ ಮಾಡಿದೆ. ಇದರ ಹೊರತಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ಆಟಗಾರರಾಗಿರೋ ಕೊಹ್ಲಿ ಚೀನಾ ಮೂಲದ ವಿವೋ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಭಾರತದಲ್ಲಿ ಅಪಸ್ವರ ಕೇಳಿಬರ್ತಿದೆ.
ಇಷ್ಟೆಲ್ಲ ಕಾರಣ ಇದ್ದರೂ ಕಂಪನಿ ಜಾಹೀರಾತಿನಲ್ಲಿ ಕೊಹ್ಲಿ ಕಾಣಿಸಿಕೊಳ್ಳುವುದು ಇಮೇಜ್‌ಗೆ ಧಕ್ಕೆ ಬರುವ ಸಾಧ್ಯತೆ ಇದೆ. ಇವೆಲ್ಲ ಕಾರಣಕ್ಕೆ ಕೊಹ್ಲಿ ಇರುವ ಜಾಹೀರಾತನ್ನ ತಾತ್ಕಾಲಿಕವಾಗಿ ಪ್ರಸಾರ ಮಾಡಲಾಗುತ್ತಿಲ್ಲ. ಆದರೆ ಕೊಹ್ಲಿ ಅಭಿಮಾನಿಗಳು, ಕೊಹ್ಲಿ ಆಟದಲ್ಲಿ ಕಳಪೆ ಪ್ರದರ್ಶನ ಕೊಡುತ್ತಿರುವ ಕಾರಣಕ್ಕಾಗಿ ವಿವೋ ಈ ರೀತಿ ಮಾಡಿದೆ ಅಂತ ಹೇಳಿಕೊಳ್ಳುತ್ತಿರುವುದಂತೂ ಸುಳ್ಳಲ್ಲ.
