ವಿಕಿಪೀಡಿಯಾದಲ್ಲಿ ತಮ್ಮ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರದ ಬಗ್ಗೆ ನೀಡಲಾಗಿರುವ ವಿವರಣೆ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಅಗ್ನಿಹೋತ್ರಿ ಅವರ ಕೋಪಕ್ಕೆ ಪ್ರಮುಖ ಕಾರಣವೆಂದರೆ, ಕಾಶ್ಮೀರ್ ಫೈಲ್ಸ್ ಒಂದು ಕಾಲ್ಪನಿಕ ಕಥೆ ಎಂದು ಹೇಳಿರುವುದು.
ಈ ಸಂಬಂಧ ಆಕ್ರೋಶ ಭರಿತರಾಗಿ ವಿಕಿಪೀಡಿಯಾಗೆ ಟ್ವೀಟ್ ಮಾಡಿರುವ ಅವರು, ಪ್ರಿಯ ವಿಕಿಪೀಡಿಯಾ ನೀವು `ಇಸ್ಲಾಮೋಫೋಬಿಯಾ, ಧರ್ಮಾಂಧತೆ, ಸಂಘಿ—- ಸೇರಿದಂತೆ ಇನ್ನೂ ಹಲವು ವಿಚಾರಗಳನ್ನು ಸೇರಿಸಲು ಮರೆತ್ತಿದ್ದೀರಿ. ನಿಮ್ಮ ಜಾತ್ಯತೀತತೆಯನ್ನು ತೋರಿಸುವಲ್ಲಿ ವಿಫಲಗೊಂಡಿದ್ದೀರಿ. ತಡ ಮಾಡದೇ ಸಂಪಾದಿಸಿ ಇನ್ನಷ್ಟು ಸೇರಿಸಿ’ ಎಂದು ಕಿಡಿಕಾರಿದ್ದಾರೆ.
ಮಾರಾಟದಲ್ಲಿ ನಂ.1 ಪಟ್ಟ ಪಡೆದುಕೊಂಡ ಓಲಾ ಇವಿ ಸ್ಕೂಟರ್
ಕಾಶ್ಮೀರಿ ಹಿಂದೂಗಳ ಬಗ್ಗೆ ಕಥಾ ಹಂದರ ಇರುವ ಇದೊಂದು ಕಾಲ್ಪನಿಕ ಕಥೆ ಎಂದು ವಿಕಿಪೀಡಿಯಾದಲ್ಲಿ ಬಣ್ಣಿಸಲಾಗಿದೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಸಾಕಷ್ಟು ಆಕ್ರೋಶಗೊಂಡಿದ್ದು, ತಮ್ಮ ಸಿಟ್ಟನ್ನು ಈ ರೀತಿ ಹೊರಹಾಕಿ ವಿಕಿಪೀಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.