ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ವಿಷಯವನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾಡಿದ ಬಳಿಕ ಒಂದು ವರ್ಗದಿಂದ ಜೀವ ಬೆದರಿಕೆ ಎದುರಿಸುತ್ತಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ.
ಅವರು ಬೆಳಗ್ಗೆ ವಾಕಿಂಗ್ಗೆ ಹೋಗುವಾಗಲೂ ಈ ಭದ್ರತೆ ನೀಡಲಾಗಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದೀಗ ವೈರಲ್ ಆಗುತ್ತಿದೆ. ಕಾಶ್ಮೀರದಲ್ಲಿ ಹಿಂದೂಗಳ ನರಮೇಧವನ್ನು ತೋರಿಸಲು ತೆರಬೇಕಾದ ಬೆಲೆ, ಅದೂ ಹಿಂದೂ ಬಹುಸಂಖ್ಯಾತ ದೇಶವಾಗಿರುವ ಭಾರತದಲ್ಲಿ ಎಂದು ವಿಷಾದದಿಂದ ವಿವೇಕ್ ಬರೆದುಕೊಂಡಿದ್ದಾರೆ. ಇದು ಇಲ್ಲಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದಿದ್ದಾರೆ.
ಆದರೆ ಈ ಭದ್ರತೆ ಕುರಿತು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಭದ್ರತೆ ನೀಡುವ ಅವಶ್ಯಕತೆ ಇದೆಯೆ? ನಮ್ಮ ತೆರಿಗೆ ಹಣ ಹೀಗೆಲ್ಲ ವ್ಯಯವಾಗುತ್ತಿದೆ ಎಂದು ಕೆಲವರು ಹೇಳಿದ್ದರೆ, ಹಿಂದೂ ದೇಶವಾಗಿರುವ ಭಾರತದಲ್ಲಿ ಸತ್ಯದ ಪರ ಮಾತನಾಡಿದರೆ ಜೀವ ಬೆದರಿಕೆ ಎದುರಿಸುವ ಸ್ಥಿತಿ ಇರುವುದು ನಿಜಕ್ಕೂ ಶೋಚನೀಯ ಎಂದು ಹಲವರು ಹೇಳುತ್ತಿದ್ದಾರೆ.