ವಿಟಮಿನ್ ಕೆ ಚರ್ಮದ ಆರೋಗ್ಯ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು ಇದು ಚರ್ಮಕ್ಕೆ ಹಾನಿಮಾಡುವಂತಹ ಫ್ರಿ ರಾಡಿಕಲ್ಸ್ ವಿರುದ್ಧ ಹೋರಾಡುತ್ತವೆ. ಹಾಗಾದ್ರೆ ವಿಟಮಿನ್ ಕೆ ಯಿಂದ ಚರ್ಮಕ್ಕೆ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.
*ವಿಟಮಿನ್ ಕೆ ರಕ್ತ ಸಂಚಾರವನ್ನು ಸರಾಗವಾಗಿ ಮಾಡುತ್ತದೆ. ಇದರಿಂದ ವಯಸ್ಸಾದ ಚಿಹ್ನೆಗಳನ್ನು ನಿವಾರಣೆಯಾಗುತ್ತದೆ. ಚರ್ಮವನ್ನು ಬಿಗಿಯಾಗಿಸಿ ಕೋಮಲವಾಗಿರಿಸುತ್ತದೆ. ಸುಕ್ಕುಗಳನ್ನು ನಿವಾರಿಸುತ್ತದೆ.
*ವಿಟಮಿನ್ ಕೆ ಚರ್ಮದ ಮೇಲಾದ ಗಾಯಗಳನ್ನು ಬಹಳ ಬೇಗನೆ ಗುಣಪಡಿಸುತ್ತದೆ.
*ಇದು ಚರ್ಮದ ಮೇಲೆ ಕಂಡುಬರುವಂತಹ ಸೋರಿಯಾಸಿಸ್ ಮತ್ತು ಎಸ್ಜಿಮಾ ಸಮಸ್ಯೆಯನ್ನು ನಿವಾರಿಸುತ್ತದೆ.
*ಇದು ಚರ್ಮದ ಮೇಲಾದ ಹಾನಿಗಳನ್ನು ನಿವಾರಿಸುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಚಿಕಿತ್ಸೆಯಲ್ಲಿ ಬಳಸುತ್ತಾರೆ.