alex Certify ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ

ವಿಟಮಿನ್ ಡಿ ಕೊರತೆಯು ಕೋವಿಡ್-19 ಸೋಂಕಿನ ತೀವ್ರ ಪ್ರಕರಣಗಳು ಮತ್ತು ಮರಣಕ್ಕೆ ಸಂಬಂಧಿಸಿದೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ.

ಈ ಸಂಶೋಧನೆಯನ್ನು ‘ಪಿಎಲ್‌ಓಎಸ್ ಒನ್ ಜರ್ನಲ್‌’ ನಲ್ಲಿ ಪ್ರಕಟಿಸಲಾಗಿದೆ. ಇಸ್ರೇಲ್‌ನ ಸಫೇಡ್‌ನಲ್ಲಿರುವ ಬಾರ್-ಇಲಾನ್ ವಿಶ್ವವಿದ್ಯಾಲಯದ ಅಜ್ರೀಲಿ ಫ್ಯಾಕಲ್ಟಿ ಆಫ್ ಮೆಡಿಸಿನ್ ಮತ್ತು ಇಸ್ರೇಲ್‌ನ ನಹಾರಿಯಾದಲ್ಲಿರುವ ಗೆಲಿಲೀ ವೈದ್ಯಕೀಯ ಕೇಂದ್ರದ ಸಂಶೋಧಕರು ನಡೆಸಿದ ಈ ಅಧ್ಯಯನದಲ್ಲಿ ವಿಟಮಿನ್ ಡಿ ಕೊರತೆ ಮತ್ತು ಕೋವಿಡ್-19 ತೀವ್ರತೆ ಮತ್ತು ಮರಣದ ನಡುವಿನ ಪರಸ್ಪರ ಸಂಬಂಧ ಕಂಡುಕೊಂಡಿದ್ದಾರೆ.

ಸೋಂಕಿಗೆ ಮುಂಚಿತವಾಗಿ ವಿಟಮಿನ್ ಡಿ ಮಟ್ಟವನ್ನು ವಿಶ್ಲೇಷಿಸಿದೆ ಈ ಅಧ್ಯಯನ. ಇದು ವೈರಲ್ ಸೋಂಕಿನ ಮಟ್ಟಗಳು ತೀವ್ರವಾಗಿರುವಾಗಲೇ, ಆಸ್ಪತ್ರೆಗೆ ದಾಖಲಾದ ಬಳಿಕ ಸಿಗುವುದಕ್ಕಿಂತ ಹೆಚ್ಚು ನಿಖರವಾದ ಮೌಲ್ಯಮಾಪನ ಕೊಡುತ್ತದೆ ಮೆಡ್‌ಆರ್‌ಎಕ್ಸ್‌ಐವಿಯಲ್ಲಿ ಪ್ರಕಟವಾದ ಫಲಿತಾಂಶಗಳ ಮೇಲೆ ಸಂಶೋಧನೆಗಳು ವರದಿಯಾಗಿವೆ.

ಪಿಸಿಆರ್‌ನ ಪಾಸಿಟಿವ್‌ ಫಲಿತಾಂಶಗಳೊಂದಿಗೆ ಗೆಲಿಲೀ ವೈದ್ಯಕೀಯ ಕೇಂದ್ರಕ್ಕೆ (ಜಿಎಂಸಿ) ಏಪ್ರಿಲ್ 2020 ಮತ್ತು ಫೆಬ್ರವರಿ 2021 ರ ನಡುವೆ ದಾಖಲಾದ 1,176 ರೋಗಿಗಳ ದಾಖಲೆಗಳನ್ನು, ಸೋಂಕಿಗೆ ಎರಡು ವಾರಗಳ ಮುಂಚಿನಿಂದ ಹಿಡಿದು ಎರಡು ವರ್ಷಗಳವರೆಗೂ ಅಳತೆ ಮಾಡಿದ ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಲಾಗಿದೆ.

ʼಸ್ನಾನʼ ಮಾಡುವ ರೀತಿ ಮೇಲೂ ಅವಲಂಬಿಸಿದೆಯಂತೆ ಆಯುಷ್ಯ….!

ವಿಟಮಿನ್ ಡಿ ಕೊರತೆಯಿರುವ ರೋಗಿಗಳು (20 ng/mL ಗಿಂತ ಕಡಿಮೆ) 40 ng/mL ಗಿಂತ ಹೆಚ್ಚು ರೋಗಿಗಳಿಗಿಂತ 14 ಪಟ್ಟು ಹೆಚ್ಚು ಕೋವಿಡ್‌ನ ತೀವ್ರತೆ ಹೊಂದಿರುವ ಸಾಧ್ಯತೆ ಇರುತ್ತದೆ.

ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಡಿ ಹೊಂದಿರುವ ರೋಗಿಗಳಲ್ಲಿ ಮರಣದ ಸಾಧ್ಯತೆ 2.3 ಪ್ರತಿಶತದಷ್ಟಿದೆ, ವಿಟಮಿನ್ ಡಿ ಕೊರತೆಯ ಗುಂಪಿನಲ್ಲಿ ಇದೇ ಪ್ರಮಾಣವು 25.6 ಪ್ರತಿಶತದಷ್ಟು ಇದೆ. ಅಧ್ಯಯನವು ವಯಸ್ಸು, ಲಿಂಗ, ಋತು (ಬೇಸಿಗೆ/ಚಳಿಗಾಲ), ದೀರ್ಘಕಾಲದ ಕಾಯಿಲೆಗ ಸಾಧ್ಯತೆಗಳನ್ನು ಪರಿಗಣಿಸಿದೆ. ಕಡಿಮೆ ವಿಟಮಿನ್ ಡಿ ಮಟ್ಟವು ರೋಗದ ತೀವ್ರತೆ ಮತ್ತು ಮರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಅಧ್ಯಯನದ ಸಾರ ತಿಳಿಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...