ವಿಟಮಿನ್ ಸಿ ಕೊರತೆಯಾದಾಗ ದೇಹದಲ್ಲಿ ಹಲವು ಸಮಸ್ಯೆಗಳು ಕಂಡು ಬರುತ್ತದೆ. ಇದರ ಲಕ್ಷಣಗಳೇನು ಗೊತ್ತಾ….?
ವಿಟಮಿನ್-ಸಿ ಕೊರತೆಯಾದಂತೆ ತ್ವಚೆ ಒಣಗಿದಂತೆ ಹಾಗೂ ನಿರ್ಜೀವವಾಗಿ ಕಾಣಿಸಲು ಆರಂಭವಾಗುತ್ತವೆ. ನಿಮ್ಮ ವಯಸ್ಸು ಸಣ್ಣದಿದ್ದರೂ ನೀವು ವಯಸ್ಸಾದವರಂತೆ ಕಾಣುತ್ತೀರಿ. ಹೆಚ್ಚು ಆಹಾರ ಪದಾರ್ಥಗಳನ್ನು ಸೇವಿಸದಿದ್ದರೂ ದೇಹತೂಕ ಹೆಚ್ಚುತ್ತಾ ಹೋಗುತ್ತದೆ.
ವಿನಾಕಾರಣ ದೇಹ ವಿಪರೀತ ಸುಸ್ತಾಗುತ್ತದೆ. ಆಯಾಸ ಮತ್ತು ಕಿರಿಕಿರಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ವಿಟಮಿನ್-ಸಿ ಕೊರತೆ ಇದ್ದಾಗ ಕೆಲವರ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಮೂಗಿನಲ್ಲಿ ರಕ್ತ ಕಾಣಿಸಿಕೊಂಡರೂ ಅದು ವಿಟಮಿನ್ ಕೊರತೆಯ ಲಕ್ಷಣ.
ವಿಟಮಿನ್ ಸಿ ಧಾರಾಳವಾಗಿರುವ ಆಹಾರವನ್ನು ಸೇವಿಸುವುದೊಂದೇ ಇದಕ್ಕೆ ಪರಿಹಾರ. ಕಿತ್ತಳೆ ಹಣ್ಣು, ನಿಂಬೆರಸ, ಬಾಳೆಹಣ್ಣು, ಅನಾನಸು, ಕಿವಿ, ಮಾವಿನ ಹಣ್ಣುಗಳನ್ನು ಧಾರಾಳವಾಗಿ ಸೇವಿಸಿ. ವಿಟಮಿನ್ ಸಿ ಹೆಚ್ಚಿಸಿಕೊಳ್ಳಿ ಮತ್ತು ನಿಮ್ಮ ದೇಹದ ಕಾಳಜಿ ವಹಿಸಿ.