
ಆರೋಗ್ಯಕರ ದೇಹಕ್ಕೆ ಅನೇಕ ರೀತಿಯ ಜೀವಸತ್ವಗಳ ಅವಶ್ಯಕತೆಯಿರುತ್ತದೆ. ಈ ಜೀವಸತ್ವಗಳಲ್ಲಿ ವಿಟಮಿನ್ ಎ ಒಂದು. ಇದು ದೃಷ್ಟಿ, ದೇಹದ ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿ ಬಲಪಡಿಸಲು ನೆರವಾಗುತ್ತದೆ. ವಿಟಮಿನ್ ಎ ಕೊರತೆಯಿಂದ ಅನೇಕ ಸಮಸ್ಯೆಗಳು ಕಾಡುತ್ತವೆ.
ವೈದ್ಯರ ಪ್ರಕಾರ, ವಿಟಮಿನ್ ಎ ರೆಟಿನಾಲ್ ಮತ್ತು ಕ್ಯಾರೋಟಿನ್ ಎಂಬ ಎರಡು ರೂಪಗಳಲ್ಲಿ ಕಂಡುಬರುತ್ತದೆ. ವಿಟಮಿನ್ ಎ ಕಣ್ಣುಗಳಿಗೆ ಬಹಳ ಮುಖ್ಯ. ಚರ್ಮ, ಕೂದಲು, ಉಗುರುಗಳು, ಗ್ರಂಥಿಗಳು, ಹಲ್ಲುಗಳು, ಒಸಡುಗಳು ಮತ್ತು ಮೂಳೆಗಳಂತಹ ದೇಹದ ಅನೇಕ ಅಂಗಗಳನ್ನು ಕಾಪಾಡಿಕೊಳ್ಳಲು ಈ ವಿಟಮಿನ್ ಸಹಾಯ ಮಾಡುತ್ತದೆ. ವಿಟಮಿನ್ ಎ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಿನ ಕಾಯಿಲೆಗಳಿಗೆ ಕಾರಣವಾಗುತ್ತದೆ. ರಾತ್ರಿ ಕುರುಡುತನ, ಕಣ್ಣಿನ ಬಿಳಿ ಭಾಗದಲ್ಲಿ ಕಲೆಗಳು.
ವಿಟಮಿನ್ ಎ ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಮಿಟಮಿನ್ ಎ ಕೊರತೆಯಿಂದ ಕಣ್ಣುಗಳಲ್ಲಿ ತುರಿಕೆ, ಮೂಳೆಗಳ ದುರ್ಬಲತೆ, ಚರ್ಮದ ಶುಷ್ಕತೆ, ಹೆಚ್ಚು ದಣಿವು, ತ್ವರಿತ ತೂಕ ನಷ್ಟ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ರಕ್ತಹೀನತೆ, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ, ಮೂತ್ರದ ಸೋಂಕು ಮತ್ತು ಉಸಿರಾಟದ ವ್ಯವಸ್ಥೆಯ ಸೋಂಕುಗಳು ಸಂಭವಿಸಬಹುದು.
ಟೊಮ್ಯಾಟೊ, ಬಟಾಣಿ, ಬ್ರೊಕೋಲಿ, ಕುಂಬಳಕಾಯಿ, ಬಿಟ್ರೂಟ್, ಕ್ಯಾರೆಟ್, ಹಸಿರು ಸೊಪ್ಪು, ತರಕಾರಿಗಳು, ಚೀನೀಕಾಯಿ, ಧಾನ್ಯಗಳು, ಸೋಯಾಬೀನ್, ಪಾಲಕ್, ಹಾಲನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಬೀನ್ಸ್, ಪನೀರ್, ಸಾಸಿವೆ, ಕಲ್ಲಂಗಡಿ, ಪಪ್ಪಾಯಿ, ಮಾವು ಇತ್ಯಾದಿಗಳಲ್ಲೂ ವಿಟಮಿನ್ ಎ ಇರುತ್ತದೆ.